

ಚಿಕ್ಕಬಳ್ಳಾಪುರ: ತಾಲೂಕಿನನಂದಿ ಗ್ರಾಮದಸಮೀಪವಿರುವ ಕಣಿವೆಬಸವಣ್ಣ ರಸ್ತೆಯಲ್ಲಿಥಾರ್ ಜೀಪು ಡಿಕ್ಕಿ ಹೊಡೆದಹಿನ್ನೆಲೆಯಲ್ಲಿ ಬೈಕ್ಸವಾರ ಮೃತಪಟ್ಟು,ವಿದ್ಯಾರ್ಥಿನಿ ಗಾಯಗೊಂಡಿರುವಘಟನೆ ನಡೆದಿದೆ.
ದೊಡ್ಡಬಳ್ಳಾಪುರ ತಾಲೂಕಿನಸೊಣಮಾರನಹಳ್ಳಿಯ ಶಶಿಕುಮಾರ್(32) ಮೃತ. ಈತನಸಹೋದರಿ ಚಂದನಾ(21) ಗಾಯಾಳು. ತಂಗಿಯನ್ನುಗ್ರಾಮದಿಂದ ಚಿಕ್ಕಬಳ್ಳಾಪುರದಲ್ಲಿನಕಾಲೇಜಿಗೆ ಕರೆದುಕೊಂಡುಬರುತ್ತಿದ್ದ ಸಂದರ್ಭದಲ್ಲಿಥಾರ್ ಜೀಪುವೇಗವಾಗಿ ಬಂದುಬೈಕಿಗೆ ಡಿಕ್ಕಿಹೊಡೆದಿದೆ. ಬಳಿಕಅಪಘಾತಕ್ಕೆ ಕಾರಣನಾದಅಪರಿಚಿತ ಚಾಲಕನೇಇಬ್ಬರು ಗಾಯಾಳುಗಳನ್ನುಜಿಲ್ಲಾಸ್ಪತ್ರೆಗೆ ಕರೆದುಕೊಂಡುಬಂದಿದ್ದು ಶಶಿಕುಮಾರ್ಆ ವೇಳೆಗಾಗಲೇಮೃತಪಟ್ಟಿರುವುದನ್ನು ವೈದ್ಯರುಖಾತ್ರಿಪಡಿಸಿದ್ದಾರೆ. ಇದರಿಂದಆರೋಪಿಯು ಭಯದಲ್ಲಿ ತನ್ನ ವಾಹನವನ್ನುಪೊಲೀಸ್ ಠಾಣೆಯಮುಂಭಾಗ ಬಿಟ್ಟುಪರಾರಿಯಾಗಿದ್ದಾನೆ. ಹಾಗೆಯೇಗಾಡಿಯ ನಂಬರ್ಪ್ಲೇಟ್ ಗಳನ್ನುಕಿತ್ತು ಹಾಕಿದ್ದಾನೆ.ನಂದಿ ಗಿರಿಧಾಮಠಾಣೆಯ ಪೊಲೀಸರುಪ್ರಕರಣ ದಾಖಲಿಸಿಕೊಂಡುತನಿಖೆ ಕೈಗೊಂಡಿದ್ದಾರೆ.
ಕಣಿವೆ ಬಸವಣ್ಣ ರಸ್ತೆಯ ಇಳಿಜಾರಿನಲ್ಲಿ ವಾಹನಗಳನ್ನು ವೇಗವಾಗಿಓಡಿಸುವಂತಹುದು, ಅಪಘಾತಗಳು ಸಂಭವಿಸುವಂತಹುದು ಸಾಮಾನ್ಯವಾಗಿದೆ. ಈ ನಿಟ್ಟಿನಲ್ಲಿ ಸುಗಮ ಸಂಚಾರವ್ಯವಸ್ಥೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರುಒತ್ತಾಯಿಸಿದ್ದಾರೆ.