ರಾಜ್ಯದಲ್ಲಿ ಚಿಕ್ಕಬಳ್ಳಾಪುರಕ್ಕೆ ಜಿಲ್ಲಾವಾರು 11ನೇ ಸ್ಥಾನ, ಕಳೆದ ಬಾರಿಗಿಂತಲೂ ಉತ್ತಮ ಸಾಧನೆ

BPL-8-PUC-NEWS-PHOTO-1.JPG
Published on

ಚಿಕ್ಕಬಳ್ಳಾಪುರ:ದ್ವೀತಿಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ಶೇ.75.80 ರಷ್ಟು (ಹೊಸ ವಿದ್ಯಾರ್ಥಿಗಳ ಮಾತ್ರ ಪರಿಗಣನೆ) ಫಲಿತಾಂಶದೊಂದಿಗೆ ಜಿಲ್ಲೆಯು ರಾಜ್ಯದಲ್ಲಿ 11 ನೇ ಸ್ಥಾನ ಪಡೆದಿದೆ. ಎಂದಿನಂತೆ ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ.
ಹೊಸಬರು, ಖಾಸಗಿ ಮತ್ತು ಪುನರಾವರ್ತಿತ ಸೇರಿ 13,303 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಈ ಪೈಕಿ 9553 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಪರೀೆ ಬರೆದಿದ್ದ 6114 ಬಾಲಕರ ಪೈಕಿ 4241 (ಶೇ.76.95) ಮತ್ತು 7189 ಬಾಲಕಿಯರ ಪೈಕಿ 5,312 ಬಾಲಕಿಯರು ಉತ್ತೀರ್ಣರಾಗಿದ್ದಾರೆ.
ಕಲಾ ವಿಭಾಗದಲ್ಲಿ 1457 ವಿದ್ಯಾರ್ಥಿಗಳ ಪೈಕಿ 594 (ಶೇ.40.77), ವಾಣಿಜ್ಯ ವಿಭಾಗದಲ್ಲಿ 5461 ವಿದ್ಯಾರ್ಥಿಗಳ ಪೈಕಿ 3805 (ಶೇ.69.68), ವಿಜ್ಞಾನ ವಿಭಾಗದಲ್ಲಿ 6385 ವಿದ್ಯಾರ್ಥಿಗಳ ಪೈಕಿ 5154 (ಶೇ.80.72) ತೇರ್ಗಡೆ ಹೊಂದಿದ್ದಾರೆ. ಇನ್ನು ನಗರ ಮತ್ತು ಗ್ರಾಮೀಣ ಭಾಗಕ್ಕೆ ಹೋಲಿಸಿದರೆ ಹಳ್ಳಿ ಮಕ್ಕಳು ಮೇಲುಗೈ ಸಾಧಿಸಿದ್ದಾರೆ. ನಗರ, ಪಟ್ಟಣ ಪ್ರದೇಶ ವ್ಯಾಪ್ತಿಯಲ್ಲಿ 9691 ವಿದ್ಯಾರ್ಥಿಗಳ ಪೈಕಿ 6756(ಶೇ.69.71) ಮತ್ತು ಗ್ರಾಮೀಣ ಭಾಗದ ವ್ಯಾಪ್ತಿಯಲ್ಲಿ 3612 ವಿದ್ಯಾರ್ಥಿಗಳ ಪೈಕಿ 2797 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಕಳೆದ 2024 ನೇ ಸಾಲಿನಲ್ಲಿ ಹೊಸಬರು, ಖಾಸಗಿ ಮತ್ತು ಪುನರಾವರ್ತಿತ ವಿದ್ಯಾರ್ಥಿಗಳು ಸೇರಿ 13,260 ಮಂದಿ ಪರೀಕ್ಷೆ ಬರೆದಿದ್ದರು. ಈ ಪೈಕಿ 10,528 ವಿದ್ಯಾರ್ಥಿಗಳು ಉತ್ತೀರ್ಣರಾಗುವುದರೊಂದಿಗೆ ರಾಜ್ಯದಲ್ಲಿ ಜಿಲ್ಲಾವಾರು 18 ಸ್ಥಾನ ಪಡೆದಿತ್ತು.

*ರಾಜ್ಯಕ್ಕೆ ಉತ್ತಮ ರ್ಯಾಂಕ್
ಚಿಕ್ಕಬಳ್ಳಾಪುರ ತಾಲೂಕಿನ ಅಗಲಗುರ್ಕಿಯ ಬಿಜಿಎಸ್ ಪದವಿ ಪೂರ್ವ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳು ರಾಜ್ಯಕ್ಕೆ 4ನೇ ರ್ಯಾಂಕ್ ಹಾಗೂ 5 ನೇ ಪಡೆದಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಎನ್.ಯಶಸ್ ಗೌಡ (596/600) ಮತ್ತು ವಾಣಿಜ್ಯ ವಿಭಾಗದಲ್ಲಿ ಪಿ.ಸಚಿನ್ (595/600) ರ್ಯಾಂಕ್ ಗಳಿಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

*ಹಿಂದಿನ ವರ್ಷಗಳ ಫಲಿತಾಂಶ
ಕಳೆದ 2024 ರಲ್ಲಿ ದ್ವೀತಿಯ ಪಿಯುಸಿ ಪರೀಕ್ಷೆಯಲ್ಲಿ ಶೇ.88.84 ಪರಷ್ಟು ಲಿತಾಂಶದೊಂದಿಗೆ 18 ನೇ ಸ್ಥಾನ, 2023ರಲ್ಲಿ ದ್ವೀತಿಯ ಪಿಯುಸಿ ಪರೀಕ್ಷೆಯಲ್ಲಿ ಜಿಲ್ಲೆಯು ಶೇ.77.77ರಷ್ಟು ಫಲಿತಾಂಶದೊಂದಿಗೆ ರಾಜ್ಯದಲ್ಲಿ 19ನೇ ಸ್ಥಾನವನ್ನು, ಕಳೆದ 2022ರಲ್ಲಿ ಶೇ.64.49 ಫಲಿತಾಂಶದೊಂದಿಗೆ 16ನೇ ಸ್ಥಾನ ಗಳಿಸಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net