ನಾಗೇಶ್-ತಿರುಮಳಪ್ಪ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ-ಉಪಾಧ್ಯಕ್ಷ

6CBP2
Published on

ಚಿಕ್ಕಬಳ್ಳಾಪುರ : ಇಲ್ಲಿನ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಪಿ.ನಾಗೇಶ್ (ಅಗಲಗುರ್ಕಿ ಕ್ಷೇತ್ರ) ಎರಡನೇ ಬಾರಿಗೆ ಮತ್ತು ಉಪಾಧ್ಯಕ್ಷರಾಗಿ ತಿರುಮಳಪ್ಪ(ಪೆರೇಸಂದ್ರ ಕ್ಷೇತ್ರ) ಆಯ್ಕೆಯಾಗಿದ್ದಾರೆ.

ಪಿಎಲ್‌ಡಿ ಬ್ಯಾಂಕ್ ಕಚೇರಿಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ತಹಸೀಲ್ದಾರ್ ನಾಗಪ್ರಶಾಂತ್ ಉಸ್ತುವಾರಿಯಲ್ಲಿ ಶುಕ್ರವಾರ ಚುನಾವಣೆ ನಡೆಯಿತು. 12 ನಿರ್ದೇಶಕ ಪೈಕಿ ಆಧ್ಯಕ್ಷ ಸ್ಥಾನಕ್ಕೆ ಪಿ.ನಾಗೇಶ್, ಉಪಾಧ್ಯಕ್ಷ ಸ್ಥಾನಕ್ಕೆ ತಿರುಮಳಪ್ಪ ಹೊರತುಪಡಿಸಿದರೆ ಉಳಿದ ಯಾರು ಉಮೇದುವಾರಿಕೆ ಸಲ್ಲಿಸದ ಕಾರಣ ಅವಿರೋಧ ಆಯ್ಕೆ ಘೋಷಿಸಲಾಯಿತು.

ಅಯ್ಕೆ ಘೋಷಣೆಯಾಗುತ್ತಿದ್ದಂತೆ ಬೆಂಬಲಿಗರು ನಗರದ ಪ್ರಮುಖ ರಸ್ತೆಗಳಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು. ಜಿಪಂ ಸದಸ್ಯ ಪಿ.ಎನ್.ಕೇಶವರೆಡ್ಡಿ, ಬಿಜೆಪಿ ಬೆಂಬಲಿತ ಬ್ಯಾಂಕಿನ ನಿರ್ದೇಶಕರಾದ ಸಾವಿತ್ರಮ್ಮ, ಬಿ.ಎನ್.ಮಂಜುಳಮ್ಮ, ಮುನಿಶಾಮಿ, ವಿ.ಆನಂದಮೂರ್ತಿ, ಎನ್.ಪ್ರಸಾದ್, ಕೆ.ಕಾಳೇಗೌಡ, ಗ್ರಾ.ಪಂ.ಅಧ್ಯಕ್ಷ ಪಿ.ಎನ್.ಚನ್ನಕೃಷ್ಣಾರೆಡ್ಡಿ ಇತರರಿದ್ದರು.

ಬಿಜೆಪಿ ತೆಕ್ಕೆಗೆ ಆಡಳಿತ

ೆ.23 ರಂದು 12 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತರು 8 ಮತ್ತು ಕಾಂಗ್ರೆಸ್-ಜೆಡಿಎಸ್ ಮೈತ್ರಿ ಬೆಂಬಲಿತ 4 ಮಂದಿ ಆಯ್ಕೆಯಾಗಿದ್ದರು. ಇದರಿಂದ ಆಡಳಿತ ಚುಕ್ಕಾಣಿಯು ಬಿಜೆಪಿ ತೆಕ್ಕೆಗೆ ಬೀಳುವುದು ಖಚಿತವಾಗಿತ್ತು. ಸಚಿವ ಡಾ ಕೆ.ಸುಧಾಕರ್ ಒಲವು ಗಳಿಸಿದ್ದ ಪಿ.ನಾಗೇಶ್ ನಿರೀಕ್ಷೆಯಂತೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net