

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ಚುನಾವಣೆಯಲ್ಲಿ ರಾಜಕೀಯ ವಿವಿಧ ಪಕ್ಷಗಳ 9 ಮತ್ತು ಪಕ್ಷೇತರರು 20 ಸೇರಿದಂತೆ ಬರೋಬ್ಬರಿ 29 ಅಭ್ಯರ್ಥಿಗಳು ಚುನಾವಣೆಗೆ ಸ್ಪರ್ಧಿಸಿದ್ದರು. ಇದರಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯ ಎನ್‌ಡಿಎ ಅಭ್ಯರ್ಥಿ ಡಾ. ಕೆ.ಸುಧಾಕರ್ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಎಂ.ಎಸ್.ರಕ್ಷರಾಮಯ್ಯ ಕಲರವ ಮಾತ್ರ ಹೆಚ್ಚಾಗಿತ್ತು. ಉಳಿದವರು ಸ್ಪಧೆರ್ಯ ಉತ್ಸಾಹಕ್ಕೆ ಸೀಮಿತರಾಗಿದ್ದಾರೆ.
*27 ಅಭ್ಯರ್ಥಿಗೆ ಠೇವಣಿ ಸಿಕ್ಕಿಲ್ಲ
ಚಿಕ್ಕಬಳ್ಳಾಪುರ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದ ಪ್ರಮುಖ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಸೇರಿದಂತೆ 27 ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದಾರೆ. ಬಿಎಸ್ಪಿ ಮಹದೇವ್ ಪಿ (4,440 ಮತ), ಸಿಪಿಐ(ಎಂ) ಮುನಿವೆಂಕಟಪ್ಪ ಎಂ.ಪಿ (4,557 ಮತ), ಎಸ್‌ಯುಎಸ್‌ಇ(ಸಿ) ಕಲಾವತಿ.ಎನ್ (2,744 ಮತ), ದಿಗ್ವಿಜಯ ಭಾರತ ಪಾರ್ಟಿ ನಾಗೇಶ್.ಎಸ್ (850 ಮತ), ಇಎಲ್‌ಪಿ (ಅಂಬೇಡ್ಕರ್ ಫುಲೆ) ಟಿ.ಆರ್. ನಾರಾಯಣರಾವ್ (762 ಮತ), ಉತ್ತಮ ಪ್ರಜಾಕೀಯ ಪಾರ್ಟಿ ವೆಂಕಟೇಶ್ ಮೂರ್ತಿ.ವಿ (2020 ಮತ), ಕರ್ನಾಟಕ ರಾಷ್ಟ್ರ ಸಮಿತಿ ಜಿ.ಸುಬ್ರಮಣಿಶೆಟ್ಟಿ (872 ಮತ) ಸೇರಿದಂತೆ 27 ಮಂದಿ ಪಕ್ಷೇತರ ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದಾರೆ.
* ನೋಟಾಗೆ ಮೂರನೇ ಸ್ಥಾನ
ಕಾಂಗ್ರೆಸ್ ಮತ್ತು ಬಿಜೆಪಿ ಹೊರತುಪಡಿಸಿದಂತೆ ನೋಟಾಗಿಂತಲೂ ಹೆಚ್ಚಿನ ಮತಗಳನ್ನು ಪಡೆಯುವಲ್ಲಿ ಇತರ ಅಭ್ಯರ್ಥಿಗಳು ವಿಫಲರಾಗಿದ್ದಾರೆ. ೨೯ ಅಭ್ಯರ್ಥಿಗಳ ಯಾರ ಮೇಲೂ ಒಲವಿಲ್ಲ ಎಂಬ ಬಟನ್ ಅನ್ನು ಬರೋಬ್ಬರಿ 6,596 ಒತ್ತಿದ್ದಾರೆ. ಇದರಿಂದ ಚಲಾವಣೆಯಾದ ಈ ಮತಗಳ ಪ್ರಮಾಣದಲ್ಲಿ ಮೂರನೇ ಸ್ಥಾನ ಸಿಕ್ಕಿದೆ.
* ಇಬ್ಬರು ಸುಧಾಕರ್ ಮತಗಳು
ಎನ್‌ಡಿಎ ಅಭ್ಯರ್ಥಿ ಡಾ ಕೆ.ಸುಧಾಕರ್ ಹೆಸರಿನ ಇಬ್ಬರು ಪಕ್ಷೇತರ ಅಭ್ಯರ್ಥಿಗಳು ಕಣಕ್ಕಿಳಿದಿದ್ದರು. ಈ ಪೈಕಿ ಸುಧಾಕರ್.ಎನ್ 1,519 ಮತ್ತು ಡಿ.ಸುಧಾಕರ 1,689 ಮತಗಳನ್ನು ಪಡೆದಿದ್ದಾರೆ.