ಸಿದ್ದರಾಮಯ್ಯಗೆ ಶೂ ತೆಗದು, ತೊಡಿಸಿದ ಕಾಂಗ್ರೆಸ್​ ಕಾರ್ಯಕರ್ತ: ವಿಡಿಯೋ ವೈರಲ್​

Siddaramaiah
Published on

ಚಿಕ್ಕಬಳ್ಳಾಪುರ: ಕಾಂಗ್ರೆಸ್​ ಕಾರ್ಯಕರ್ತರೊಬ್ಬರು ಸಿದ್ದರಾಮಯ್ಯಗೆ ಶೂ ತೆಗದು, ತೊಡಿಸಿದ ಘಟನೆ ಚಿಕ್ಕಬಳ್ಳಾಪುರ ನಗರ ಹೊರವಲಯದ ಹಾರೋಬಂಡೆ ಸಾಯಿಬಾಬಾ ಮಂದಿರ ಬಳಿ ನಡೆದಿದೆ.

ಘಟನೆ ಸಂಬಂಧಿಸಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಕಾರಿನಿಂದ ಕೆಳಗೆ ಇಳಿಯುವಾಗ ಶೂ ತೆಗೆದ ಕಾಂಗ್ರೆಸ್ ಕಾರ್ಯಕರ್ತ, ಮತ್ತೆ ಸಿದ್ದರಾಮಯ್ಯ ಅವರು ವಾಪಾಸ್ ಹೋಗುವಾಗಲೂ ಶೂ ತೊಡಿಸಿದರು.

ಸಿದ್ದರಾಮಯ್ಯ ಅವರು ಬಾಗೇಪಲ್ಲಿಗೆ ತೆರಳುವಾಗ ಮಾರ್ಗಮಧ್ಯೆ ಕಾಂಗ್ರೆಸ್ ಮುಖಂಡ ಜಿ.ಎಚ್.ನಾಗರಾಜ್ ಟ್ರಸ್ಟ್​ನ ಸಾಯಿಬಾಬಾ ಮಂದಿರಕ್ಕೆ ಭೇಟಿ ನೀಡಿದರು. ಈ ವೇಳೆ ಶೂ ತೆಗೆಯಲು ಮತ್ತು ಹಾಕಿಕೊಳ್ಳಲು ಕಷ್ಟಪಡುತ್ತಿದ್ದನ್ನು ನೋಡಿ ಕಾರ್ಯಕರ್ತ ನಾರಾಯಣಸ್ವಾಮಿ ಎಂಬಾತ ಶೂ ಧರಿಸಿದ್ದಾರೆ.

ಇದೀಗ ಜಾಲತಾಣದಲ್ಲಿ ವೈರಲ್​ ಆಗಿರುವ ವಿಡಿಯೋ ಕುರಿತು ಪರ-ವಿರೋಧ ಚರ್ಚೆಯಾಗುತ್ತಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net