ಪಿಎಲ್ಡಿ ಬ್ಯಾಂಕಿನ ಹಿಡಿತ ಸಾಧಿಸುವಲ್ಲೂ ಸಂಸದ ಸುಧಾಕರ್ ಯಶಸ್ವಿ

Published on

ಚಿಕ್ಕಬಳ್ಳಾಪುರ: ನಿರೀಕ್ಷೆಯಂತೆ ಪಿಎಲ್ಡಿ ಬ್ಯಾಂಕಿನ ಹಿಡಿತವನ್ನು ಸಂಸದ ಡಾ ಕೆ.ಸುಧಾಕರ್ ಬಣ ತೆಗೆದುಕೊಳ್ಳುವಲ್ಲಿ ಮತ್ತೆ ಯಶಸ್ವಿಯಾಗಿದೆ.

12 ನಿರ್ದೇಕ ಸ್ಥಾನ ಪೈಕಿ ಈಗಾಗಲೇ ಅವಿರೋಧವಾಗಿ 4 ನಿರ್ದೇಶಕರು, ತೀವ್ರ ಪೈಪೋಟಿಯ ಚುನಾವಣೆಯಲ್ಲಿ 6 ನಿರ್ದೇಶಕ ಸ್ಥಾನಗಳನ್ನು ತನ್ನದಾಗಿಸಿಕೊಳ್ಳುವ ಮೂಲಕ ಸ್ಪಷ್ಟ ಬಹುಮತದೊಂದಿಗೆ ಆಡಳಿತ ಚುಕ್ಕಾಣಿ ಹಿಡಿಯುವುದು ಖಚಿತವಾಗಿದೆ.

*ಪೈಪೋಟಿಯ ಆಮಿಷ

ಚಿಕ್ಕಬಳ್ಳಾಪುರ ನಗರದಲ್ಲಿನ ಪಂಚಗಿರಿ ಬೋಧನಾ ಪ್ರೌಢಶಾಲೆಯಲ್ಲಿ ಬೆಳಿಗ್ಗೆ 9 ರಿಂದ ಸಂಜೆ 4 ರವರೆಗೆ 6 ನಿರ್ದೇಶಕ ಸ್ಥಾನಕ್ಕೆ ಮತದಾನ ನಡೆಯಿತು. ಆಡಳಿತ ಚುಕ್ಕಾಣಿ ಹಿಡಿಯುವಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಹಣಾಹಣಿ ಇದ್ದು ಗೆಲುವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡು ಪರಸ್ಪರ ಪೈಪೋಟಿಯಲ್ಲಿ ಮತದಾರರಿಗೆ ಆಮಿಷವನ್ನೊಡ್ಡಲಾಯಿತು. ಮತದಾನದ ಕೇಂದ್ರದ ಹೊರ ಭಾಗದಲ್ಲಿ ಹಣವನ್ನು ಕೊಟ್ಟು ಮತಯಾಚಿಸಲಾಯಿತು.

*ನ್ಯಾಯಾಲಯದಲ್ಲಿ ಪ್ರಕರಣ

ಸಾಲಗಾರ ವಿಭಾಗದಿಂದ ನಂದಿ ಕ್ಷೇತ್ರ( ಸಾಮಾನ್ಯ ಮೀಸಲು ) ನಿರ್ದೇಶಕ ಸ್ಥಾನದ ವಿವಾದವು ನ್ಯಾಯಾಲಯದ ಮೆಟ್ಟಿಲೇರಿದೆ. ಇದಕ್ಕೆ ಫಲಿತಾಂಶವನ್ನು ಘೋಷಿಸದೇ ಜಿಲ್ಲಾ ಖಜಾನೆ ಇಲಾಖೆಯ ಮತಪೆಟ್ಟಿಗೆಯನ್ನು ಸುರಕ್ಷತೆಯಾಗಿಡಲಾಗಿದೆ.

* ಗೆಲುವಿಗೆ ವಿಜಯೋತ್ಸವ

ಚುನಾವಣಾ ಫಲಿತಾಂಶ ಘೋಷಣೆಯಾಗುತ್ತಿದ್ದಂತೆ ಸಂಸದ ಡಾ ಕೆ.ಸುಧಾಕರ್ ನೇತೃತ್ವದಲ್ಲಿ ವಿಜಯೋತ್ಸವ ಆಚರಿಸಲಾಯಿತು. ಬೆಂಬಲಿಗರು ಸಂಭ್ರಮದಲ್ಲಿ ಘೋಷಣೆಗಳನ್ನು ಕೂಗಿ ಪಟಾಕಿಯನ್ನು ಸಿಡಿಸಿದರು. ಸಿಹಿ ಹಂಚಿ ಸಂಭ್ರಮಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net