ಜೋಗಿ ಚಿತ್ರದ ಹಾಡನ್ನು ನೆನಪಿಸಿದ ಘಟನೆ: ಸ್ನೇಹಿತರ ಜತೆ ಎಣ್ಣೆ ಪಾರ್ಟಿಗೆ ಹೋದವ ಭೀಕರ ಸಾವು!

CKB Man
Published on

ಚಿಕ್ಕಬಳ್ಳಾಪುರ: ಕುಡಿದ ಮತ್ತಿನಲ್ಲಿ ಕೊಪ ಬಂದ ಕಾರಣಕ್ಕೆ ಸ್ನೇಹಿತನನ್ನೇ ಚಾಕುವಿನಿಂದ ತಿವಿದು ಬರ್ಬರವಾಗಿ ಕೊಲೆ ಮಾಡಿರುವ ಘಟನೆ‌ ಚಿಕ್ಕಬಳ್ಳಾಪುರ ತಾಲ್ಲೂಕು ಮುಸ್ಟೂರು ಗ್ರಾಮದ ಬಳಿ ನಡೆದಿದೆ.

ಟಾಟಾ ಏಸ್ ಚಾಲಕನಾಗಿದ್ದ ವೆಂಕಟೇಶ್(26) ತನ್ನ ಆಪ್ತ‌ ಸ್ನೇಹಿತರಿಂದ ಕೊಲೆಯಾದ ದುರ್ದೈವಿ. ವೆಂಕಟೇಶ್ ಕೆಲಸದಿಂದ ಬರುವುದನ್ನೇ ಕಾಯುತ್ತಾ ಮೊದಲೇ ಸಂಚು ರೂಪಿಸಿಕೊಂಡಿದ್ದ ಹಂತಕರು, ಆತ ಬಂದ ಕೂಡಲೇ ಸಣ್ಣದೊಂದು ಎಣ್ಣೆ ಪಾರ್ಟಿ ಇದೆ ಬಾ ಎಂದು ಹೇಳಿ ಮದ್ಯದೊಂದಿಗೆ ಮುಸ್ಟೂರು ಕೆರೆ ಸಮೀಪ ಕರೆದುಕೊಂಡು ಹೋಗಿದ್ದಾರೆ.

ಮದ್ಯ ಸೇವಿಸಿದ ಕೆಲ ಹೊತ್ತಿನಲ್ಲೇ ಏಕಾಏಕಿ ಕಲ್ಲುನಿಂದ ತಲೆಗೆ ಹೊಡೆದು ಮತ್ತು ಚಾಕುವಿನಿಂದ ಎದೆಗೆ ಐದು ಬಾರಿ ತಿವಿದು ಸಾಯಿಸಿದ್ದಾರೆ. ಜಾನಿ, ಆಂಜಿ,ಗೋಪಿ, ಕೃಷ್ಣ ಸೇರಿ‌ 6 ಮಂದಿ ಕೃತ್ಯದಲ್ಲಿ ಭಾಗಿಯಾಗಿರುವ ಸಂಶಯವಿದ್ದು, ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸರು ಇಬ್ಬರನ್ನ ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

ಸ್ನೇಹ ಅಂತ ಒಳಗೊಳಗೆ ಸ್ಕೀಮ್​ ಹಾಕ್ತಾರೋ... ಒಂದೇ ತಟ್ಟೇಲಿ ಅನ್ನ ತಿಂದು ಮುಹೂರ್ತ ಇಡ್ತಾರೋ ಎಂಬ ಜೋಗಿ ಚಿತ್ರದ ಹಾಡಿನ ಸಾಲಿಗೆ ಈ ಘಟನೆ ಪೂರಕವಾಗಿದ್ದು, ಯಾರನ್ನು ನಂಬುವುದು ಎಂಬ ಅಭಿಪ್ರಾಯ ಓದುಗರ ಮನದಲ್ಲಿ ಮೂಡಿದರೆ ಅಚ್ಚರಿಯೇನಿಲ್ಲ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net