

ಚಿಕ್ಕಬಳ್ಳಾಪುರ: ಜಿಲ್ಲಾದ್ಯಂತ ಶುಕ್ರವಾರ ನಡೆದ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಗೆ 279 ಮಂದಿ ಗೈರಾಗಿದ್ದಾರೆ.
ಬಿಗಿ ಬಂದೋಬಸ್ತ್ ನಡುವೆ ಜಿಲ್ಲೆಯ 53 ಪರೀಾ ಕೇಂದ್ರಗಳಲ್ಲಿ ಪ್ರಥಮ ಭಾಷೆ ಪರೀಕ್ಷೆ ನಡೆಯಿತು. ಇದಕ್ಕೆ 15,736 ಪೈಕಿ 15,457 ವಿದ್ಯಾರ್ಥಿಗಳು ಹಾಜರಾಗಿದ್ದರು ಎಂದು ಸಾರ್ವಜನಿಕ ಶಿಣ ಇಲಾಖೆಯ ಉಪ ನಿರ್ದೇಶಕ ಮರಿಕೆಂಚೇಗೌಡ ತಿಳಿಸಿದ್ದಾರೆ.
ಕಳೆದ ಬಾರಿಯಂತೆ ಈ ಸಾಲಿನಲ್ಲೂ ಸಿಸಿ ಕ್ಯಾಮೆರಾ ನಿಗಾದಲ್ಲಿ ಪರೀಕ್ಷೆ ಕೈಗೊಂಡಿದ್ದರಿಂದ ಯಾವುದೇ ಅಕ್ರಮ, ಅವ್ಯವಹಾರಗಳು ನಡೆಯಲಿಲ್ಲ. ಡಿಬಾರ್ ಪ್ರಕರಣಗಳು ವರದಿಯಾಗಿಲ್ಲ. ನಿಗದಿತ ಅವಧಿಯಲ್ಲಿ ಕೇಂದ್ರಗಳಿಗೆ ಪರೀಕ್ಷೆ ಸಾಮಗ್ರಿಗಳ ರವಾನೆಯಾಗಿದ್ದು ಪ್ರತಿಯೊಂದು ಕಡೆ ಬಿಗಿ ಬಂದೋ ಬಸ್ತ್ ಕೈಗೊಳ್ಳಲಾಗಿತ್ತು.
ಪರೀಕ್ಷಾ ಕೇಂದ್ರಕ್ಕೆ ಅರ್ಧ ತಾಸಿಗೂ ಮುಂಚೆಯೇ ವಿದ್ಯಾರ್ಥಿಗಳು ಆಗಮಿಸಿ ಎದುರು ನೋಡುತ್ತಿದ್ದ, ಹಾಗೆಯೇ ಕೊನೆ ಸಿದ್ಧತೆ ಹಂತವಾಗಿ ಓದಿನಲ್ಲಿ ಮಗ್ನರಾಗಿದ್ದರು. ಪರೀಾ ಕೊಠಡಿ, ನೋಂದಣಿ ಸಂಖ್ಯೆ ಹುಡುಕಿಕೊಡುವಲ್ಲಿ ಪಾಲಕರು ನಿರತರಾಗಿದ್ದ ದೃಶ್ಯ ಕಂಡು ಬಂತು.
*ತಾಲೂಕುವಾರು ಗೈರು
ಪ್ರಥಮ ಭಾಷೆ ಪರೀಕ್ಷೆಗೆ ಬಾಗೇಪಲ್ಲಿಯಲ್ಲಿ 73, ಚಿಕ್ಕಬಳ್ಳಾಪುರ 46, ಚಿಂತಾಮಣಿ 48, ಗೌರಿಬಿದನೂರು 64, ಗುಡಿಬಂಡೆ 16 ಹಾಗೂ ಶಿಡ್ಲಟ್ಟದಲ್ಲಿ 32 ವಿದ್ಯಾರ್ಥಿಗಳು ಸೇರಿದಂತೆ 279 ವಿದ್ಯಾರ್ಥಿಗಳು ಗೈರಾಗಿದ್ದಾರೆ.