ಜಿಲ್ಲೆಯಲ್ಲಿ ಉಜ್ವಲ ಯೋಜನೆಯಡಿ 81,469 ಫಲಾನುಭವಿಗಳು

9991
Published on

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿ 81,469 ಫಲಾನುಭವಿಗಳಿಗೆ ಅಡುಗೆ ಅನಿಲ ಸಂಪರ್ಕವನ್ನು ಕಲ್ಪಿಸಲಾಗಿದೆ. ಕಳೆದ 2016-17 ನೇ ಸಾಲಿನಿಂದ ಪ್ರಧಾನ ಮಂತ್ರಿ ಉಜ್ವಲ ಹಾಗೂ ಉಜ್ವಲ ವಿಸ್ತರಿತ ಯೋಜನೆಯಡಿ ಬಡ ಜನರಿಗೆ ಉಚಿತವಾಗಿ ಅಡುಗೆ ಅನಿಲ ಸಿಲಿಂಡರ್ ಸಂಪರ್ಕವನ್ನು ಕಲ್ಪಿಸಿದ್ದು ಇದು ಕಳೆದ 2024 ರ ಏಪ್ರಿಲ್ನಿಂದ ಸ್ಥಗಿತಗೊಂಡಿದೆ. ಇದರ ನಡುವೆ 81,469 ಫಲಾನುಭವಿಗಳಿಗೆ ಉಜ್ವಲ ಮತ್ತು ಉಜ್ವಲ ವಿಸ್ತರಿತ ಯೋಜನೆಯಡಿ ಸೌಲಭ್ಯ ಸಿಕ್ಕಿದೆ.

*ಉಜ್ವಲ ಯೋಜನೆ

ಉಜ್ವಲ ಯೋಜನೆಯು ಕೇಂದ್ರ ಸರ್ಕಾರದ ಮಹಾತ್ವಕಾಂಕ್ಷೆ ಕಾರ್ಯಕ್ರಮಗಳಲ್ಲೊಂದಾಗಿದ್ದು ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) ಕುಟುಂಬಗಳಿಗೆ ಅತ್ಯಂತ ಕಡಿಮೆ ಬೆಲೆಗೆ ಅಡುಗೆ ಅನಿಲವನ್ನು ಪೂರೈಸುವುದು ಪ್ರಮುಖ ಉದ್ದೇಶ. ಇದರ ಲಾನುಭವಿ ಕುಟುಂಬದ ಮಹಿಳೆ. ಮರಗಳನ್ನು ಸೌಧೆಗಾಗಿ ಕಡಿಯುವುದು, ಕಟ್ಟಿಗೆ ಒಲೆಯಿಂದ ಹೆಚ್ಚಿನ ಹೊಗೆ ಹೊರಸೂಸುವುದು, ಅಡುಗೆ ತಯಾರಿಸುವ ಸಂದರ್ಭದಲ್ಲಿ ನಾನಾ ಕಿರಿಕಿರಿ, ಪರಿಸರ ನಾಶ ಸೇರಿದಂತೆ ಹಲವು ಸಮಸ್ಯೆಗಳನ್ನು ತಡೆಗಟ್ಟುವುದರ ಉದ್ದೇಶ ಹೊಂದಲಾಗಿದೆ. ಮಹಿಳೆಯರಿಗೆ ಉಚಿತವಾಗಿ ಅಡುಗೆ ಅನಿಲ ಸಿಲಿಂಡರ್ ಸಂಪರ್ಕ ಒದಗಿಸುವ ಮತ್ತು ಪ್ರತಿ ಸಿಲಿಂಡರ್ಗೆ ಸಬ್ಸಿಡಿ ನೀಡುವ ಈ ಯೋಜನೆಗೆ ದೇಶದಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇದರ ನಡುವೆ ಸಿಲಿಂಡರ್ ದರ ನಿರಂತರವಾಗಿ ಏರಿಕೆ ಕಾಣುತ್ತಿದ್ದು ಇತ್ತೀಚೆಗೆ ಆಕ್ರೋಶದ ಅಪಸ್ವರಗಳು ಹೆಚ್ಚಾಗಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net