ಕ್ಯಾಮೆರಾಗೆ ಪೋಸ್​ ನೀಡಿ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಟೀಕೆಗೆ ಗುರಿಯಾದ್ರು!

Criticise
Published on

ಚಿಕ್ಕಬಳ್ಳಾಪುರ: ಕೋವಿಡ್​-19 ನಿಯಂತ್ರಣಕ್ಕೆ ಇಡೀ ವಿಶ್ವವೇ ಹರಸಾಹಸ ಪಡುತ್ತಿದೆ. ಅದಕ್ಕಾಗಿ ಸಾಮಾಜಿಕ‌ ಅಂತರ ಕಾಯ್ದುಕೊಳ್ಳಿ ಎಂದು ಮನವಿ ಮಾಡಲಾಗುತ್ತಿದೆ.

ಆದರೆ, ಎಷ್ಟೇ ಮನವಿ ಮಾಡಿದರೂ ಸರ್ಕಾರಿ ಕೆಲಸದಲ್ಲಿರುವವರು ಕಚೇರಿಯಲ್ಲೇ ಹುಟ್ಟು ಹಬ್ಬದ ಆಚರಣೆ ಮಾಡಿ ಕೇಕ್ ಕತ್ತರಿಸಿರುವ ಪೊಟೊಗಳು ಸಾಮಾಜಿಕ ಜಾಲತಣಗಳಲ್ಲಿ ವೈರಲ್ ಆಗಿ ಟೀಕೆಗೆ ಗುರಿಯಾಗಿದ್ದಾರೆ.

ಕರೊನಾ ನಿಯಂತ್ರಣಕ್ಕಾಗಿ ಪ್ರತಿಯೊಬ್ಬರು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಹಾಗೂ ಮಾಸ್ಕ್ ಧರಿಸಬೇಕೆಂಬ ನಿಯಮ ಇದ್ದರೂ ಜಿಲ್ಲಾ ಆಸ್ಪತ್ರೆಯಲ್ಲಿ ಯಾವುದನ್ನೂ ಲೆಕ್ಕಿಸದೇ ಹುಟ್ಟ ಹಬ್ಬ ಆಚರಣೆ ಮಾಡಿದ್ದಾರೆ.

ಜನಸಾಮಾನ್ಯರಿಗೆ ಬುದ್ಧಿ ಹೇಳಬೇಕಾದ ಜಿಲ್ಲಾ ಆಸ್ಪತ್ರೆಯ ವೈದ್ಯರು ಹಾಗೂ ಪ್ರಯೊಗಲಾಯದ ಸಿಬ್ಬಂದಿ ನೊಂದಣಿ ವಿಭಾಗದ ಸೇರಿ ಸಾಮಾಜಿಕ ಅಂತರ ಕಾಪಾಡದೇ ಹುಟ್ಟುಹಬ್ಬ ಆಚರಿಸಿ ಕೇಕ್ ಕತ್ತರಿಸಿರುವ ಪೊಟೊಗಳು ವೈರಲ್ ಆಗಿ ಸಾರ್ವಜನಿಕರ ಟೀಕೆಗೆ ಗುರಿಯಾಗಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net