ಯೋಗ ಮಾಡಲು ಮನಸ್ಸಿಲ್ಲದೆ ಕಾಲೇಜು ಕಟ್ಟಡದಿಂದ ಜಿಗಿದು ಎಸ್ಕೇಪ್ ಆದ ವಿದ್ಯಾರ್ಥಿಗಳು

Untitled(4)
Published on

ಚಿಕ್ಕಬಳ್ಳಾಪುರ: ಅಂತರಾಷ್ಟ್ರೀಯ ಯೋಗ ದಿನದಂದೇ ವಿದ್ಯಾರ್ಥಿಗಳು ಯೋಗ ಮಾಡಲು ಮನಸ್ಸಿಲ್ಲದೆ ಕಾಲೇಜು ಕಟ್ಟಡದಿಂದ ಜಿಗಿದು ಎಸ್ಕೇಪ್ ಗಿರುವ ಘಟನೆ ನಡೆದಿದೆ.

ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ಪಟ್ಟಣದ ಪ್ರತಿಷ್ಠಿತ ನ್ಯಾಷನಲ್ ಕಾಲೇಜಿನಲ್ಲಿ ಈ ಘಟನೆ ನಡೆದಿದೆ. ಅಂತರರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಯೋಗ ಕ್ಲಾಸ್ ಆಯೋಜನೆ ಮಾಡಲಾಗಿತ್ತು.

ಇಂದು ಮಧ್ಯಾಹ್ನ 12 ಗಂಟೆಗೆ ವಿದ್ಯಾರ್ಥಿಗಳಿಗೆ ಯೋಗ ಕ್ಲಾಸ್ ಆಯೋಜಿಸಲಾಗಿತ್ತು. ಆದರೆ ಯೋಗ ಮಾಡಲು ಮನಸ್ಸಿಲ್ಲದೆ ಕಾಲೇಜು ಕಟ್ಟಡ ಹಾರಿ ವಿದ್ಯಾರ್ಥಿಗಳು ಎಸ್ಕೇಪ್ ಆಗಿರುವ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net