ಅಗತ್ಯ ವಸ್ತು ಮನೆ ಬಾಗಿಲಿಗೆ

C JAJUR NEWS 28-3-20 (3)
Published on

ಚಿಕ್ಕಜಾಜೂರು: ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಸಮಿತಿಯಿಂದ ಔಷಧ, ಕಿರಾಣಿ, ತರಕಾರಿ, ಹಾಲು ವಿತರಣೆಗೆ ಸೂಕ್ತ ಕ್ರಮ ಕೈಗೊಂಡಿದೆ.

ಗ್ರಾಪಂ ಆವರಣದಲ್ಲಿ ಶನಿವಾರ ಅಧ್ಯಕ್ಷ ಡಿ.ಸಿ.ಮೋಹನ್ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ವರ್ತಕರ ಸಭೆಯಲ್ಲಿ ಈ ನಿರ್ಣಯ ತೆಗೆದುಕೊಳ್ಳಲಾಯಿತು.

ಚಿಕ್ಕಜಾಜೂರು ಗ್ರಾಪಂ ವ್ಯಾಪ್ತಿಗೆ ಬರುವ ಹೂಸನಗರ, ಬಾಣಗೆರೆ, ಕಾವಲುಹಟ್ಟಿ ಪ್ರದೇಶದಲ್ಲಿ ತರಕಾರಿ, ಹಣ್ಣು, ಹೂವುಗಳನ್ನು ವಾರದಲ್ಲಿ ಮೂರು ದಿನ ಬೆಳಗ್ಗೆ 7ರಿಂದ ಮಧ್ಯಾಹ್ನ 12ರ ವರೆಗೆ ಮಾತ್ರ ಮಾರಾಟ ಮಾಡಬೇಕು ಎಂದು ಸೂಚಿಸಲಾಗಿದೆ.

ಪ್ರತಿ ಭಾನುವಾರ ಮಾತ್ರ ಪಟ್ಟಣದ ಹೊರವಲಯದಲ್ಲಿ ಪ್ರತಿ ಮೀನು ಮತ್ತು ಮಾಂಸ ಮಾರಾಟ ಮಾಡಬೇಕು ಎಂದು ತಿಳಿಸಲಾಯಿತು.

ತಾಪಂ ಸದಸ್ಯ ಪಿ.ಎಸ್.ಮೂರ್ತಿ, ಗ್ರಾಪಂ ಉಪಾಧ್ಯಕ್ಷೆ ಗಂಗಮ್ಮ ಮಹೇಶ್, ಪಿಎಸ್‌ಐ ಮೋಹನ್ ಕುಮಾರ್, ಡಾ.ಪ್ರದೀಪ್‌ಕುಮಾರ್, ಪಿಡಿಒ ಪುನೀತ್, ಜಿ.ಕೆ.ಯೋಗೇಶ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net