ಚಿಕ್ಕಜಾಜೂರಿನಲ್ಲಿ ಕ್ರಿಮಿನಾಶಕ ಸಿಂಪಡಣೆ

C JAJUR KITA 02
Published on

ಚಿಕ್ಕಜಾಜೂರು: ಪಟ್ಟಣದಲ್ಲಿ ಕರೊನಾ ವೈರಸ್ ನಿಯಂತ್ರಣಕ್ಕಾಗಿ ಗುರುವಾರ ಗ್ರಾಮಾಡಳಿತದ ಸಹಯೋಗದಲ್ಲಿ ಅಗ್ನಿಶಾಮಕ ದಳದಿಂದ ಕ್ರಿಮಿನಾಶಕ ಸಿಂಪಡಿಸಲಾಯಿತು.

ಕ್ರಿಮಿನಾಶಕ ಸಿಂಪಡಣೆ ಮೊದಲು ಗ್ರಾಮಾಡಳಿತದಿಂದ ಮನೆ ಮುಂದಿನ ವಸ್ತುಗಳು ಹಾಗೂ ಸಾಕು ಪ್ರಾಣಿಗಳನ್ನು ಬೇರೆಡೆ ಕಟ್ಟುವಂತೆ ಜಾಗೃತಿ ಮೂಡಿಸಲಾಗಿತ್ತು.

ಹೊಸನಗರ, ರೈಲು, ಬಸ್ ನಿಲ್ದಾಣ, ಆಸ್ಪತ್ರೆ, ಸಮುದಾಯ ಭವನ ಮತ್ತಿತರ ಜನನಿಬಿಡ ಪ್ರದೇಶಗಳಲ್ಲಿ ಕ್ರಿಮಿನಾಶಕ ಸಿಂಪಡಿಸಲಾಯಿತು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಡಿ.ಸಿ. ಮೋಹನ್, ತಾಪಂ ಸದಸ್ಯ ಪಿ.ಎಸ್. ಮೂರ್ತಿ, ಗ್ರಾಪಂ ಸದಸ್ಯರಾದ ಮಹೇಶ್, ಸಿದ್ದೇಶ್, ಹೊಳಲ್ಕೆರೆ ಅಗ್ನಿ ಶಾಮಕ ಅಧಿಕಾರಿ ಎಂ.ಎನ್. ಶಿವಾನಂದಪ್ಪ ಮತ್ತು ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net