

ಚಿಕ್ಕಜಾಜೂರು: ಇಲ್ಲಿನ ಜಯರಾಮ ಜನ ಸೇವಾ ಸಂಘದಿಂದ ಸೋಮವಾರ ದಿನಗೂಲಿ ಕೆಲಸಗಾರರು ಹಾಗೂ ಬಡ ಕುಟುಂಬಗಳಿಗೆ ಐದು ನೂರು ರೂ. ಮೌಲ್ಯದ ಆಹಾರ ಧಾನ್ಯದ ಕಿಟ್‌ಗಳನ್ನು 19 ಕುಟುಂಬಕ್ಕೆ ವಿತರಿಸಿತು.
ಸಂಸ್ಥೆಯ ಸದಸ್ಯ ಹಗೇದ್ ಹಾಲೇಶ್ ಮಾತನಾಡಿ, ನಮ್ಮ ಸಂಸ್ಥೆಯಿಂದ ಸಹಾಯ ಬಯಸುವವರು ಮೊ: 9880640115 ಸಂಪರ್ಕಿಸುವಂತೆ ತಿಳಿಸಿದರು.
ಗ್ರಾಪಂ ಸದಸ್ಯ ಸಿದ್ದೇಶ್, ಬಿ.ವಿ.ರಾಜು, ಸಿ.ಸೋಮಶೇಖರ್, ಬಸವರಾಜ್, ಜಿ.ಪಿ.ಗಿರೀಶ್, ಸಿ.ಎನ್.ಸುರೇಶ್ ಇತರರಿದ್ದರು.