ಆಭರಣ ಹರಾಜು ತಡೆಗೆ ಆಗ್ರಹ

C JAJUR PROTEST 01
Published on

ಚಿಕ್ಕಜಾಜೂರು: ಕೃಷಿಕರ ಚಿನ್ನಾಭರಣ ಹರಾಜು ರದ್ದತಿಗೆ ಆಗ್ರಹಿಸಿ ಸಮೀಪದ ಮತ್ತಗದೂರು ಬ್ಯಾಂಕ್‌ವೊಂದರ ಎದುರು ರಾಜ್ಯ ರೈತ ಸಂಘದ ಕಾರ್ಯಕರ್ತರು ಶನಿವಾರ ಪ್ರತಿಭಟನೆ ನಡೆಸಿದರು.

ರಾಜ್ಯ ರೈತ ಸಂಘದ ಉಪಾಧ್ಯಕ್ಷ ಸಿದ್ದವೀರಪ್ಪ ಮಾತನಾಡಿ, ರೈತರು ದೇಶದ ಅನ್ನದಾತರು. ಬೆಳೆ ಬೆಳೆಯಲು ಮತ್ತು ಬೆಳೆದ ಬೆಳೆ ಉಳಿಸಿಕೊಳ್ಳಲಿಕ್ಕಾಗಿ ತಮ್ಮಲ್ಲಿದ್ದ ಆಭರಣ ಅಡವಿಟ್ಟು ಸಾಲ ಪಡೆದಿದ್ದಾರೆ. ಈ ಸಾಲವನ್ನೂ ಕೃಷಿ ಸಾಲವೆಂದೇ ಪರಿಗಣಿಸಿ ಎಲ್ಲ ರೀತಿಯ ಸೌಲಭ್ಯ ನೀಡಬೇಕು. ಒಡವೆ ಸಾಲದ ಸುಸ್ತಿ ಬಡ್ಡಿ ಮನ್ನಾ ಮಾಡಬೇಕು. ಮತ್ತು ಸಾಲ ಕಟ್ಟಲು ಸಾಕಷ್ಟು ಕಾಲಾವಕಾಶ ನೀಡಬೇಕು ಎಂದು ಒತ್ತಾಯಿಸಿದರು.

ಬ್ಯಾಂಕ್ ಹಿರಿಯ ವ್ಯವಸ್ಥಾಪಕ ಕೃಷ್ಣಮೂರ್ತಿ ಮತ್ತು ವ್ಯವಸ್ಥಾಪಕ ಗುರುಮೂರ್ತಿ ಮಾತನಾಡಿ, ನಾವು ಮೇಲಧಿಕಾರಿಗಳ ಆದೇಶದಂತೆ ನಡೆಯಬೇಕಾಗಿದೆ. ಈಗ ತಾತ್ಕಾಲಿಕವಾಗಿ ಹರಾಜು ನಿಲ್ಲಿಸಿ ನಿಮ್ಮ ಬೇಡಿಕೆಗಳನ್ನು ನಮ್ಮ ಮೇಲಧಿಕಾರಿಗಳ ಗಮನಕ್ಕೆ ತರುತ್ತೇವೆ ಎಂದು ಹೇಳಿದರು.

ಮುಖಂಡರಾದ ಬಸವರಾಜ್, ರಂಗಪ್ಪ, ಚಿದಾನಂದಪ್ಪ, ರೇವಣಸಿದ್ದಪ್ಪ, ವೀರಭದ್ರಪ್ಪ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net