

ಚಿಕ್ಕಜಾಜೂರು: ಸಮೀಪದ ಹಿರೇಎಮ್ಮಿಗನೂರು ಹೊಂಬೆಳಕು ತೋಟಗಾರಿಕೆ ರೈತ ಉತ್ಪಾದಕ ಸಂಘದವರು ಬುಧವಾರ ರೈತರಿಂದ ನೇರವಾಗಿ ಕಲ್ಲಂಗಡಿ ಖರೀದಿಸಿ ಮಾರಾಟ ಮಾಡಿದರು.
ಸಂಸ್ಥೆ ಕಾರ್ಯನಿರ್ವಾಹಕ ಅಧಿಕಾರಿ ಸಿ.ಎಸ್.ಪ್ರದೀಪ್ ಮಾತನಾಡಿ, ಹಿರೇಎಮ್ಮಿಗನೂರು ಭಾಗದ ರೈತರು ಬೆಳೆದ ಹಣ್ಣು, ತರಕಾರಿಗಳನ್ನು ಯೋಗ್ಯ ಬೆಲೆಗೆ ಖರೀದಿಸಿ ಮಾರಾಟ ಮಾಡಲಾಗುತ್ತಿದೆ ಎಂದು ತಿಳಿಸಿದರು.
ದುಗ್ಗನಾಳ್ ಗ್ರಾಮದ ಮಧು ಎಂಬುವರು ಲಾಕ್‌ಡೌನ್ ಹಿನ್ನೆಲೆಯಲ್ಲಿ ಕಲ್ಲಂಗಡಿ ಮಾರಾಟ ಮಾಡದೆ ಸಂಕಷ್ಟಕ್ಕೆ ಸಿಲುಕಿದ್ದರು. ನಾವು ನೇರ ಅವರ ಜಮೀನಿಗೆ ತೆರಳಿ ಫಸಲನ್ನು ಖರೀದಿಸಿ ಹಳ್ಳಿಹಳ್ಳಿಗಳಲ್ಲಿ ಮಾರಾಟ ಮಾಡಿ ರೈತರಿಗೆ ಅನುಕೂಲ ಕಲ್ಪಿಸುತ್ತಿದ್ದೇವೆ ಎಂದರು.
ಬಸವರಾಜ್, ಕಲ್ಲಪ್ಪ, ಶಿವಕುಮಾರ್, ಮೋಹನ್‌ಕುಮಾರ್, ದೇವೇಂದ್ರಪ್ಪ, ರಮೇಶ್ ಇತರರಿದ್ದರು.
ಹಿರೇಎಮ್ಮಿಗನೂರು ವ್ಯಾಪ್ತಿಯಲ್ಲಿ ಹಣ್ಣು, ತರಕಾರಿ ಇತರ ತೋಟಗಾರಿಕೆ ಬೆಳೆಗಳನ್ನು ಬೆಳೆದ ರೈತರು ಫಸಲನ್ನು ಮಾರಲು ಮೊ: 9743068215 ಸಂಪರ್ಕಿಸಬಹುದು.