ಹಿರೇಕಂದವಾಡಿ ನಮ್ಮೂರು-ನಮ್ಮ ಕೆರೆ ಯೋಜನೆಗೆ ಆಯ್ಕೆ

C-JAJUR NAMMA KERE 18
Published on

ಚಿಕ್ಕಜಾಜೂರು: ಸಮೀಪದ ಬಿ. ದುರ್ಗ ಹೋಬಳಿಯ ಹಿರೇಕಂದವಾಡಿ ಗ್ರಾಮವನ್ನು ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ನಮ್ಮ ಊರು, ನಮ್ಮ ಕೆರೆ ಯೋಜನೆಗೆ ಆಯ್ಕೆ ಮಾಡಲಾಗಿದೆ ಎಂದು ಧಾರವಾಡದ ಪ್ರಾದೇಶಿಕ ಇಂಜಿನಿಯರ್ ಮಂಜುನಾಥ್ ತಿಳಿಸಿದರು.

ಹಿರೇಕಂದವಾಡಿ ಗ್ರಾಮದಲ್ಲಿ ಮಂಗಳವಾರ ನಡೆದ ನಮ್ಮ ಊರು ನಮ್ಮ ಕೆರೆ ಯೋಜನೆ ಪೂರ್ವಭಾವಿ ಸಭೆ ಉದ್ಘಾಟಿಸಿ ಮಾತನಾಡಿ, ಧರ್ಮಸ್ಥಳ ಸಂಸ್ಥೆಯಿಂದ ಗ್ರಾಮ ಕೆರೆ ಅಭಿವೃದ್ಧಿ ಕಾರ್ಯ ನಡೆಯಲಿದ್ದು, ಇದಕ್ಕೆ ಸ್ಥಳೀಯರು ಸಹಕಾರ ನೀಡಬೇಕು ಎಂದು ಕೋರಿದರು.

ತಾಲೂಕು ಕೃಷಿ ಅಧಿಕಾರಿ ಮಹದೇವ್, ಒಕ್ಕೂಟದ ಅಧ್ಯಕ್ಷ ಬಿ.ಆರ್. ಈಶ್ವರಪ್ಪ. ತಾಲೂಕು ಪಂಚಾಯಿತಿ ಸದಸ್ಯ ಬಿ. ದೇವರಾಜ್, ವಲಯಾಧಿಕಾರಿ ಕಲ್ಲೇಶಪ್ಪ, ಗ್ರಾಮಸ್ಥರಾದ ಕರಿಯಪ್ಪ, ಚಂದ್ರಶೇಖರಪ್ಪ, ಎನ್.ಇ. ನಂಜಪ್ಪ, ತಿಪ್ಪೇಶಪ್ಪ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net