1.36 ಲಕ್ಷ ರೂ. ಮೌಲ್ಯದ ಮದ್ಯ ಕಳವು

C JAJUR CRIME 17
Published on

ಚಿಕ್ಕಜಾಜೂರು: ಸಮೀಪದ ಕೋಟೆಹಾಳ್ ಗೇಟ್ ಬಳಿಯ ಮದ್ಯದ ಅಂಗಡಿಯ ಚಾವಣಿ ತೆರೆದು ಒಳ ಪ್ರವೇಶಿಸಿದ ಚೋರರು, 1.36 ಲಕ್ಷ ರೂ. ಮೌಲ್ಯದ ಮದ್ಯ ಕದ್ದು ಪರಾರಿಯಾಗಿದ್ದಾರೆ.

ಮದ್ಯದ ಅಂಗಡಿ ತಿಪ್ಪೇಸ್ವಾಮಿ ಎಂಬುವರಿಗೆ ಸೇರಿದ್ದು, ಲಾಕ್‌ಡೌನ್ ಕಾರಣಕ್ಕೆ ಮಾ.22ರಿಂದ ಅಂಗಡಿಯನ್ನು ಬಂದ್ ಮಾಡಲಾಗಿತ್ತು. ಗುರುವಾರ ಬೆಳಗ್ಗೆ ಕಳುವಾಗಿರುವುದು ತಿಳಿದು ಬಂದಿದೆ.

ಮಾಲೀಕ ತಿಪ್ಪೇಸ್ವಾಮಿ ಅವರ ದೂರಿನ ಮೇರೆಗೆ ಹೊಳಲ್ಕೆರೆ ತಾಲೂಕು ಅಬಕಾರಿ ನಿರೀಕ್ಷಕಿ ಕೆ.ಲತಾ, ಎಸ್.ಐ.ಅವಿನಾಶ್ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಚಿಕ್ಕಜಾಜೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net