ಹೊಳಲ್ಕೆರೆ ಸಮಗ್ರ ಅಭಿವೃದ್ಧಿ ಗುರಿ

C JAJURU RAITASAMPARKA-20 (1)
Published on

ಚಿಕ್ಕಜಾಜೂರು: ಮಾದರಿ ತಾಲೂಕು ನಿರ್ಮಾಣಕ್ಕೆ ಶ್ರಮಿಸಲಾಗುವುದು ಎಂದು ಶಾಸಕ ಎಂ.ಚಂದ್ರಪ್ಪ ಹೇಳಿದರು.

ಗ್ರಾಮದಲ್ಲಿ ಸೋಮವಾರ ಸಿಸಿ ರಸ್ತೆ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿ, ಇತ್ತೀಚೆಗೆ ವಾಹನ ಸಂಚಾರ ದಟ್ಟಣೆ ಹೆಚ್ಚಾಗಿದೆ. ಭವಿಷ್ಯದ ದೃಷ್ಟಿಯಿಂದ ಬಿ.ದುರ್ಗ ಮತ್ತು ಚಿಕ್ಕಜಾಜೂರಿನ ರಸ್ತೆ ವಿಸ್ತರಣೆಗೆ ಪ್ರಸ್ತಾವನೆ ಕಳಿಸಲಾಗಿದೆ. ಇದಕ್ಕೆ ವರ್ತಕರು ಮತ್ತು ಸಾರ್ವಜನಿಕರು ಸಹಕಾರ ನೀಡುವ ಮೂಲಕ ಅಭಿವೃದ್ಧಿ ಕಾರ್ಯಕ್ಕೆ ಸ್ಪಂದಿಸಬೇಕು ಎಂದರು.

ಕೆರೆಗಳಿಗೆ ನೀರು ಹರಿಸುವ ಹೆಚ್ಚುವರಿ ಕಾರ್ಯಕ್ಕೆ 100 ಕೋಟಿ ರೂ. ಮಂಜೂರು ಮಾಡಿಸಿದ್ದು, ಶೀಘ್ರದಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು ಎಂದು ಹೇಳಿದರು.

ಗ್ರಾಪಂ ಅಧ್ಯಕ್ಷ ಡಿ.ಸಿ.ಮೋಹನ್ ಮಾತನಾಡಿ, ಚಿಕ್ಕಜಾಜೂರಿನ ಮಾರುತಿ ನಗರಕ್ಕೆ ಕುಡಿಯುವ ನೀರಿನ ವ್ಯವಸ್ಥೆ ಮತ್ತು ಪಟ್ಟಣಕ್ಕೆ ಓವರ್‌ಹೆಡ್ ಟ್ಯಾಂಕ್‌ನ ಅಗತ್ಯವಿದೆ ಎಂದು ತಿಳಿಸಿದರು.

ಜಿಪಂ ಸದಸ್ಯ ತಿಪ್ಪೇಸ್ವಾಮಿ, ಮಾಜಿ ಅಧ್ಯಕ್ಷ ಎಲ್.ಬಿ.ರಾಜಶೇಖರ್, ಬಿಜೆಪಿ ಮುಖಂಡ ಜಿ.ಕೆ.ಯೋಗೇಶ್, ಗುತ್ತಿಗೆದಾರ ರಾಜ್‌ಶೇಖರ್, ಆನಂದಪ್ಪ, ಪಿಎಸ್‌ಐ ಮೋಹನ್ ಕುಮಾರ್, ಸಹಾಯಕ ಕೃಷಿ ಅಧಿಕಾರಿ ಶ್ರೀನಿವಾಸ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net