ಸಾಧನೆ ಹಾದಿಗೆ ಶಿಕ್ಷಣವೇ ಅಸ್ತ್ರ

C JAJUR BHOVI 26 (1)
Published on

ಚಿಕ್ಕಜಾಜೂರು: ಕರೊಬಾ ನಿಯಂತ್ರಿಸಲು ಎಲ್ಲರೂ ಸರ್ಕಾರದ ಆದೇಶಗಳನ್ನು ಪಾಲಿಸಬೇಕು ಎಂದು ಚಿತ್ರದುರ್ಗ ಭೋವಿ ಮಠದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಹೇಳಿದರು.

ಹೊಳಲ್ಕೆರೆ ತಾಲೂಕು ಗಡಿ ಭಾಗದಲ್ಲಿರುವ ಗರಗ ಗ್ರಾಮಕ್ಕೆ ಭಾನುವಾರ ಭೇಟಿ ನೀಡಿ 42 ಮಂದಿಗೆ ಆಹಾರದ ಕಿಟ್ ವಿತರಿಸಿ ಮಾತನಾಡಿದರು.

ಜನತೆ ಸ್ವಚ್ಚತೆಗೆ ಆದ್ಯತೆ ನೀಡಬೇಕು. ಜತೆಗೆ ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು. ಅಕ್ಷರ ಮಾತ್ರ ಬದುಕನ್ನು ಬದಲಾಯಿಸುವ ಶಕ್ತಿ ಹೊಂದಿದೆ ಎಂದರು.

ಗ್ರಾಪಂ ಅಧ್ಯಕ್ಷ ಡಿ.ಸಿ.ಮೋಹನ್, ರಾಜ್ಯ ಸರ್ಕಾರಿ ಸಂಘದ ನಿರ್ದೆಶಕ ಕೆ.ಮಂಜುನಾಥ್, ಕೃಷಿ ನಿರ್ಧಶಕ ರವಿಕುಮಾರ್, ಪ್ರದೀಪ್ ಕುಮಾರ್, ಗೋವಿಂದಪ್ಪ, ಪ್ರತಾಪ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net