ಸಹಕಾರ ಸಂಘಕ್ಕೆ ಅವಿರೋಧ ಆಯ್ಕೆ

C JAJURU SUDHAKAR 17
Published on

ಚಿಕ್ಕಜಾಜೂರು: ಸ್ಥಳೀಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆ ಈಚೆಗೆ ನಡೆಯಿತು. ಅಧ್ಯಕ್ಷರಾಗಿ ಜಿ.ಕೆ.ಯೋಗೇಶ್, ಉಪಾಧ್ಯಕ್ಷರಾಗಿ ಬಿ.ಸುಧಾಕರ್ ಅವಿರೋಧ ಆಯ್ಕೆಯಾದರು.

ನಿರ್ದೇಶಕರಾದ ಕೆ.ಎಂ.ಮಹೇಶ್, ಕೆ.ಎಂ.ಪ್ರಕಾಶ್, ಕೆ.ಎಸ್.ಅಶೋಕ್, ಟಿ.ಮಂಜುನಾಥ್, ಎಸ್.ನರಸಿಂಹರಾಜು, ಎಚ್.ಎಸ್.ಮಂಜುನಾಥ್, ಎಚ್.ಮಹೇಂದ್ರ, ಪಿ.ಕೆ.ಪವನ್‌ಕುಮಾರ್, ಸುಧಮ್ಮ, ಜ್ಯೋತಿ ಉಪಸ್ಥಿತರಿದ್ದರು.

ಸಹಕಾರಿ ಸಂಘದ ಅಭಿವೃದ್ಧಿ ಅಧಿಕಾರಿ ಎಸ್.ಇ.ಮಂಜುನಾಥ್ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು ಎಂದು ಸಂಘದ ಕಾರ್ಯದರ್ಶಿ ಬಿ.ಕೆ.ನಟರಾಜ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net