ಸಂಕಷ್ಟಕ್ಕೆ ನೆರವಾಗುವುದು ಮಾನವೀಯತೆ

C JAJUR AKKI 04
Published on

ಚಿಕ್ಕಜಾಜೂರು: ದೇಶ ಕಷ್ಟದಲ್ಲಿರುವ ಜನರಿಗೆ ದಾನಿಗಳ ಸಹಕಾರ ಅತ್ಯಗತ್ಯ ಎಂದು ಹೊಳಲ್ಕೆರೆ ತಹಸೀಲ್ದಾರ್ ನಾಗರಾಜ್ ತಿಳಿಸಿದರು.

ಸಮೀಪದ ವಿಶ್ವನಾಥನಹಳ್ಳಿ ಗ್ರಾಮದಲ್ಲಿ ಸುಡಗಾಡು ಸಿದ್ಧರ ಕುಟಂಬಕ್ಕೆ ಒಂದು ವಾರದ ಆಹಾರ ಸಾಮಗ್ರಿ ವಿತರಿಸಿ ಮಾತನಾಡಿದರು.

ದೇಶದಲ್ಲಿ ಕರೊನಾ ಭೀತಿಯಿಂದಾಗಿ ಬಡವರು, ನಿರ್ಗತಿಕರ ಬದುಕು ಶೋಚನೀಯವಾಗಿದೆ. ಇಂತಹ ಸಂದರ್ಭದಲ್ಲಿ ಜನರು, ಸಂಘ, ಸಂಸ್ಥೆಗಳು ಸ್ವಯಂ ಪ್ರೇರಿತರಾಗಿ ನೆರವಿನ ಹಸ್ತ ನೀಡಿ ಮಾನವೀಯತೆ ಮೆರೆಯಬೇಕು ಎಂದರು.

ಉದ್ಯಮಿ ಜಿ.ಎಚ್.ಇಂದ್ರಪ್ಪ, ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ಬಿ.ತಿಪ್ಪೇಸ್ವಾಮಿ, ಬಿಜೆಪಿ ಮುಖಂಡ ಎಚ್.ಕೆ.ಲಿಂಗರಾಜ್, ಹಿರೇಎಮ್ಮಿಗನೂರು ಗ್ರಾಪಂ ಅಧ್ಯಕ್ಷ ಕೆ.ಸಿ.ಈಶ್ವರಪ್ಪ, ಉಪ ತಹಸೀಲ್ದಾರ್ ಸಿದ್ದಪ್ಪ, ಪ್ರದೀಪ್‌ಕುಮಾರ್, ಬಸವರಾಜ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net