ಕೆ.ಆರ್.ಜ್ಞಾನೇಶ್ವರಿ ಪ್ರಥಮ

CHICKJAJUR GNANESWARI 23
Published on

ಚಿಕ್ಕಜಾಜೂರು: ವಿಟಿಯುನ 2018-19 ನೇ ಸಾಲಿನ ಎಂಸಿಎ ಅಂತಿಮ ವರ್ಷದ ಪದವಿ ಪರೀಕ್ಷೆಯಲ್ಲಿ ದಾವಣಗೆರೆಯ ಯುಬಿಡಿಟಿ ಕಾಲೇಜಿನ ಕೆ.ಆರ್.ಜ್ಞಾನೇಶ್ವರಿ ಶೇ. 96 ಅಂಕ ಪಡೆದು ಎಸ್‌ಟಿ ವಿದ್ಯಾರ್ಥಿಗಳಲ್ಲಿ ವಿಟಿಯುಗೆ ಮೊದಲ ಸ್ಥಾನ ಗಳಿಸಿದ್ದಾರೆ.

ಸ್ನಾತಕೋತ್ತರ ಪದವಿ ಪರೀಕ್ಷೆಯಲ್ಲಿ 500 ಕ್ಕೆ 472 ಅಂಕ ಗಳಿಸಿರುವ ಜ್ಞಾನೇಶ್ವರಿ ಅವರು ಹೊಳಲ್ಕೆರೆ ತಾಲೂಕು ಕೊಡಗವಳ್ಳಿಹಟ್ಟಿಯ ಕೆನರಾ ಬ್ಯಾಂಕ್ ನಿವೃತ್ತಿ ನೌಕರ ಕೆ.ಬಿ.ರಾಜಪ್ಪ ಮತ್ತು ಎಂ.ಜಿ.ಮಂಜುಳಾ ದಂಪತಿ ಪುತ್ರಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net