ಚಿಕ್ಕಜಾಜೂರಲ್ಲಿ ಆಹಾರದ ಕಿಟ್ ವಿತರಣೆ

C JAJUR AKKI 11
Published on

ಚಿಕ್ಕಜಾಜೂರು: ಗ್ರಾಮ ಪಂಚಾಯಿತಿ ಆವರಣದಲ್ಲಿ ಶನಿವಾರ ದಾವಣಗೆರೆ ಲಕ್ಷ್ಮಿ ವೆಂಕಟೇಶ್ ಗ್ರಾನೈಟ್ ಮಾಲೀಕ ಜಿ.ಎಚ್.ಇಂದ್ರಪ್ಪ ಅವರು ಸವಿತಾ ಸಮಾಜದ 35 ಮಂದಿಗೆ ಆಹಾರದ ಕಿಟ್‌ನ್ನು ವಿತರಿಸಿದರು.

ಗ್ರಾಪಂ ಅಧ್ಯಕ್ಷ ಡಿ.ಸಿ.ಮೋಹನ್ ಮಾತನಾಡಿ, ಕರೊನಾದ ಕರಿನೆರಳಿನಲ್ಲಿರುವ ಬಡ ಜನತೆಗೆ ವರ್ತಕರು ಮತ್ತು ಸಂಘ ಸಂಸ್ಥೆಗಳು ನೆರವು ನೀಡುತ್ತಿರುವುದು ಸಮಾಧಾನ ತಂದಿದೆ ಎಂದರು.

ತಹಸಿಲ್ದಾರ್ ಕೆ.ನಾಗರಾಜ್, ಪಿಎಸ್‌ಐ ಮೋಹನ್‌ಕುಮಾರ್, ಇಒ ತಾರಾನಾಥ್, ಕೆ.ಸಿ.ಈಶ್ವರಪ್ಪ, ಬಿಜೆಪಿ ಮುಖಂಡ ಕೆ.ಎಚ್.ಲಿಂಗರಾಜ್, ಡಾ.ಸತೀಶ್, ಮರುಳಸಿದ್ದಪ್ಪ, ಬಸವರಾಜ್, ಮಹೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net