

ಚಿಕ್ಕಜಾಜೂರು: ದೇಶಕ್ಕೆ ಕರೊನಾ ಆಪತ್ತು ಪ್ರಸ್ತುತ ಸಂದರ್ಭದಲ್ಲಿ ಸೇವಾ ಸಂಸ್ಥೆಗಳು ಉದಾರತೆ ತೋರುತ್ತಿರುವುದು ಶ್ಲಾಘನಾರ್ಹ ಎಂದು ತಹಸೀಲ್ದಾರ್ ಕೆ.ನಾಗರಾಜ್ ತಿಳಿಸಿದರು.
ಬುಧವಾರ ಹೊಳಲ್ಕೆರೆ ತಾಲೂಕು ಮುತ್ತಗದೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಮತ್ತು ಹೋಂ ಕ್ವಾರಂಟೈನ್‌ನಲ್ಲಿ ಇರುವವರಿಗೆ ದಾವಣಗೆರೆ ಶುಭೋದಯ ಸೇವಾ ಸಂಸ್ಥೆ ವತಿಯಿಂದ ಮಾಸ್ಕ್, ಸ್ಯಾನಿಟೈಸರ್ ವಿತರಿಸಿ ಮಾತನಾಡಿದರು.
ಸಂಸ್ಥೆ ಕಾರ್ಯದರ್ಶಿ ಎಚ್.ಬಿ.ಕುಮಾರ್ ಮಾತನಾಡಿ, ವೈರಸ್ ನಿಯಂತ್ರಣ ಉದ್ದೇಶದಿಂದ ಬಿ.ದುರ್ಗ ಹೋಬಳಿಯ ಎಲ್ಲ ಆರೋಗ್ಯ ಇಲಾಖೆ ಸಿಬ್ಬಂದಿ ಮತ್ತು ಹೋಂ ಕ್ವಾರಂಟೈನ್‌ಗಳಿಗೆ ಉಚಿತವಾಗಿ ಮಾಸ್ಕ್, ಸ್ಯಾನಿಟೈಸರ್ ನೀಡಲಾಗುತ್ತಿದೆ ಎಂದರು.
ತಹಸೀಲ್ದಾರ್ ಕೆ.ನಾಗರಾಜ್, ತಾಲೂಕು ಆರೋಗ್ಯಾಧಿಕಾರಿ ಕೃಷ್ಣಮೂರ್ತಿ, ವೈದ್ಯಾಧಿಕಾರಿ ಸುಯನ್, ಬಿಜೆಪಿ ತಾಲೂಕು ಅಧ್ಯಕ್ಷ ಸಿದ್ದೇಶ್, ಎಂ.ಎಸ್.ರವಿಕುಮಾರ್, ವೆಂಕಟೇಶ್ ನಾಯಕ್, ರುದ್ರೇಗೌಡ, ರೇವಣಸಿದ್ದಪ್ಪ ಮತ್ತಿತರರಿದ್ದರು.