

ಚಿಕ್ಕಜಾಜೂರು: ಕರೊನಾ ಹರಡುವ ಭೀತಿಯಲ್ಲಿ ಗ್ರಾಮಕ್ಕೆ ಒಳ ಬರದಂತೆ, ಹೊರ ಹೋಗದಂತೆ ನಂದಿಹಳ್ಳಿ, ಹೂಸಹಳ್ಳಿ ಗ್ರಾಮಸ್ಥರು ರಸ್ತೆಗೆ ಮುಳ್ಳಿನ ಬೇಲಿ ಹಾಕಿ ಸಂಚಾರ ಬಂದ್ ಮಾಡಿದರು.
ಸ್ಥಳಕ್ಕೆ ಆಗಮಿಸಿದ್ದ ಚಿಕ್ಕಜಾಜೂರು ಪೋಲಿಸ್ ಠಾಣೆ ಪಿಎಸ್‌ಐ ಮೋಹನ್‌ಕುಮಾರ್ ಮತ್ತು ಸಿಬ್ಬಂದಿ ಬೇಲಿ ತೆರವುಗೊಳಿಸಿದರು.
ಸಾರ್ವಜನಿಕರಿಗಾಗಿ ಇರುವ ರಸ್ತೆಗೆ ಬೇಲಿ ಹಾಕಿ ಬಂದ್ ಮಾಡಬೇಡಿ. ಇದರ ಬದಲು ನಿಮ್ಮ ಮನೆಯ ಮುಂದೆ ಬೇಲಿ ಹಾಕಿಕೊಂಡು ನೀವು ಹೊರಹೋಗದಂತೆ ಮತ್ತು ಬೇರೆಯವರು ಬರದಂತೆ ನಿಬರ್ಂಧ ವಿಧಿಸಿಕೊಳ್ಳಿ ಎಂದು ಸಲಹೆ ನೀಡಿದರು.