ಮಹಾರಾಷ್ಟ್ರ ಹಳ್ಳಿಯಲ್ಲಿ ಚಿರತೆ ಓಡಾಟ : ಗಡಿಗ್ರಾಮಗಳ ಜನತೆ ಅಲರ್ಟ್ ಆಗಿರಲು ಸೂಚನೆ

Chita
Published on

ಅರಣ್ಯ ಅಧಿಕಾರಿಗಳಿಂದ ಜಾಗೃತಿ | ಮಹಾರಾಷ್ಟçದ ಹಳ್ಳಿಗಳಲ್ಲಿ ಚಿರತೆ ಸಂಚಾರ ?

ವಿಜಯವಾಣಿ ಸುದ್ದಿಜಾಲ ಕಲಬುರಗಿ
ಮಹಾರಾಷ್ಟçದ ಬೋರುಟಿ ಗ್ರಾಮದ ಸುತ್ತಮುತ್ತಲಿನ ಹೊಲದಲ್ಲಿ ಚಿರತೆ ಸಂಚರಿಸಿರುವ ಬಗ್ಗೆ ಮಾಹಿತಿ ಇದ್ದು, ಹೀಗಾಗಿ ಗಡಿಯಲ್ಲಿನ ಜನರು ಎಚ್ಚರ ವಹಿಸಬೇಕು ಎಂದು ಅರಣ್ಯ ಆಳಂದ ವಲಯ ಅರಣ್ಯಾಧಿಕಾರಿ ಜಗನ್ನಾಥ ಕೋರಳ್ಳಿ ಸಲಹೆ ನೀಡಿದರು.
ಅಫಜಲಪುರ ತಾಲೂಕಿನ ಮಾಶಾಳ ಗ್ರಾಮಕ್ಕೆ ಗುರುವಾರ ಭೇಟಿ ನೀಡಿ ರೈತರು ಹಾಗೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದ ಅವರು, ಅಕ್ಕಲಕೋಟ ತಾಲೂಕಿನ ಬೋರುಟಿ ಗ್ರಾಮದ ಜಮೀನೊಂದರಲ್ಲಿ ಚಿರತೆ ಕಾಣಿಸಿಕೊಂಡಿದ್ದು, ಜಿಂಕೆಯನ್ನು ತಿಂದು ಹಾಕಿದೆ ಎಂದು ಶಂಕಿಸಲಾಗಿದೆ. ಮಹಾರಾಷ್ಟçದ ಅರಣ್ಯ ಅಧಿಕಾರಿಗಳು ಈ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ. ಮಾಶಾಳ ಸಮೀಪದ ಗ್ರಾಮವಾಗಿದ್ದು, ಜನರು ಎಚ್ಚರ ವಹಿಸಬೇಕು ಎಂದು ಹೇಳಿದರು.
ರೈತಾಪಿ ವರ್ಗದವರು, ಕೃಷಿ ಕಾರ್ಮಿಕರು ಹಾಗೂ ಜಮೀನಿನಲ್ಲಿ ವಾಸವಿರುವವರು ಎಚ್ಚರಿಕೆಯಿಂದ ಇರಬೇಕು. ಒಂಟಿಯಾಗಿ ಸಂಚರಿಸಬೇಡಿ, ಹೊಲಗಳಿಗೆ ಗುಂಪು ಕಟ್ಟಕೊಂಡು ಹೋಗಿ. ಸಾಕು ಪ್ರಾಮಾಣಿಗಳನ್ನು ರಕ್ಷಣೆ ಮಾಡಿಕೊಳ್ಳಬೇಕು. ತಾಲೂಕಿನಲ್ಲಿ ಎಲ್ಲಾದರೂ ಚಿರತೆ ಕಾಣಿಸಿಕೊಂಡರೆ ಹಾಗೂ ಹೆಜ್ಜೆ ಗುರುತು ಕಂಡುಬAದಲ್ಲಿ ಅರಣ್ಯ ಇಲಾಖೆಯ ಮೊ. ೮೬೧೮೬ ೦೫೦೫೯, ೭೦೨೨೩ ೪೪೮೩೭ ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡಿ ಎಂದು ತಿಳಿಸಿದರು.
ಕರಜಗಿ ಉಪ ವಲಯ ಅರಣ್ಯಾಧಿಕಾರಿ ಸಂತೋಷ ನಿಪ್ಪಾಣಿ, ಅಧಿಕರಾರಿಗಳಾದ ಸಂತೋಷಕುಮಾರ ಬಿ., ಸಿದ್ದಾರೂಢ ಶಿಂಧೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net