

ಯೂತ್ ಫಾರ್ ಸೇವಾ ಚಾಮರಾಜನಗರ ಘಟಕದದ ವತಿಯಿಂದ ಚಾಮರಾಜನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಭಾನುವಾರ ‘ಚಿಗುರು ಚಿಣ್ಣರ ಮೇಳ’ ಶಾಲಾ ಮಕ್ಕಳ ಸಾಂಸ್ಕೃತಿಕ ಸ್ಪರ್ಧೆ ಮತ್ತು ಕ್ರೀಡೆಗಳು ನೆರವೇರಿದವು.
ಕಾರ್ಯಕ್ರಮದಲ್ಲಿ 30ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. 21 ಕ್ಕೂ ಹೆಚ್ಚು ಸಾಂಸ್ಕೃತಿಕ ಹಾಗೂ ಕ್ರೀಡಾ ಸ್ಪರ್ಧೆಗಳು ನೆರವೇರಿದವು. ರವಿ ಸಂತು ಬಳಗದ ವತಿಯಿಂದ 1200 ವಿದ್ಯಾರ್ಥಿಗಳಿಗೆ ಪ್ರಮಣ ಪತ್ರ ವಿತರಿಸಲಾಯಿತು.
ಸಮಾರೋಪ ಸಮಾರಂಭದಲ್ಲಿ ರವಿಸಂತು ಬಳಗದ ರವಿ ಸಂತು, ಸುರೇಶ್ ಗೌಡ, ಪ್ರಮುಖರಾದ ಕುಮಾರ್ ಸಂದೀಪ್, ಚಿಕ್ಕರಾಜು, ಎಂ.ಎಂ.ನಾಗರಾಜು, ಪೂಜಾ ಸುಭಾಷ್, ಬಿ.ಸಿ.ಆನಂದ್ ಇತರರಿದ್ದರು.