

ಹುಬ್ಬಳ್ಳಿ: ಹುಬ್ಬಳ್ಳಿಯಿಂದ ಧಾರವಾಡಕ್ಕೆ ತೆರಳುತ್ತಿದ್ದ ಬಿಆರ್‌ಟಿಎಸ್ ಚಿಗರಿ ಬಸ್ ಕಾರಿಡಾರ್ ಬಿಟ್ಟು ಬೈಕ್ ಸವಾರನ ಸಮೇತ ಇಲ್ಲಿಯ ಭೈರಿದೇವರಕೊಪ್ಪ ಹತ್ತಿರದ ಮಂಜುನಾಥ ವೈನ್ಸ್ ಪಕ್ಕದ ಭಜರಂಗ್ ಗ್ರಾನೈಟ್ ಮಳಿಗೆಗೆ ಭಾನುವಾರ ಡಿಕ್ಕಿ ಹೊಡೆದಿದೆ. ಇದರಿಂದ ಬಸ್ ಜಖಂಗೊಂಡಿದ್ದು, ಬೈಕ್ ಸವಾರನಿಗೆ ಗಾಯಗಳಾಗಿವೆ.
ಭೈರಿದೇವರಕೊಪ್ಪದ ಹತ್ತಿರ ಚಿಗರಿ ಚಾಲಕ ಫ್ರಂಟ್ ಡೋರ್ ಓಪನ್ ಇಟ್ಟುಕೊಂಡು ಬಸ್ ಚಲಾಯಿಸಿದ್ದರಿಂದ ಸ್ಟೇರಿಂಗ್ ಲಾಕ್ ಆಗಿದೆ. ಆಗ ಬಸ್ ರಸ್ತೆ ಬಿಟ್ಟು ಪಕಕ್ಕೆ ತೆರಳಿದೆ ಎನ್ನಲಾಗುತ್ತಿದೆ. ಬಸ್‌ನಲ್ಲಿದ್ದ ಪ್ರಯಾಣಿಕರಿಗೆ ಯಾವುದೇ ಅಪಾಯ ಸಂಭವಿಸಿಲ್ಲ. ಉತ್ತರ ಸಂಚಾರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.