

ಜಗಳೂರು: ಪಟ್ಟಣ ವ್ಯಾಪ್ತಿಯ ಅನಧಿಕೃತ ಬಡಾವಣೆಗಳಿಗೆ ಬಿ- ಖಾತೆ ಪಡೆಯುವ ಕುರಿತು ಅಧಿಕಾರಿಗಳು ಗುರುವಾರ ಪಪಂ ವತಿಯಿಂದ ಪ್ರಮುಖ ಬೀದಿಗಳಲ್ಲಿ ಅಭಿಯಾನ ನಡೆಸಿ ಜನರಿಗೆ ಮಾಹಿತಿ ನೀಡಿದರು.
ಪಪಂ ಅಧ್ಯಕ್ಷ, ಮುಖ್ಯಾಧಿಕಾರಿ, ಆರೋಗ್ಯ ನಿರೀಕ್ಷಕ ಸೇರಿ ಅಧಿಕಾರಿಗಳು ಪಟ್ಟಣದ ಹದಿನೆಂಟು ವಾರ್ಡ್ಗಳಿಗೆ ಸಂಚರಿಸಿ ಬಿ- ಖಾತೆ ಬಗ್ಗೆ ತಿಳಿಸಿದರು.
ಮುಖ್ಯಾಧಿಕಾರಿ ಲೋಕ್ಯಾನಾಯ್ಕ ಮಾತನಾಡಿ, ಅನಧಿಕೃತ ಬಡಾವಣೆಗಳಲ್ಲಿ ಇರುವ ನಿವೇಶನ, ಕಟ್ಟಡಗಳಿಗೆ ಬಿ- ಖಾತೆ ಪಡೆಯಲು ರಾಜ್ಯ ಸರ್ಕಾರ 3 ತಿಂಗಳು ಅವಕಾಶ ನೀಡಿದೆ. ಹೀಗಾಗಿ ನಿವೇಶನ, ಕಟ್ಟಡಗಳಿಗೆ ಎ ಮತ್ತು ಬಿ-ಖಾತೆ ಪಡೆಯಲು ಕರ್ನಾಟಕ ಪೌರಸಭೆಗಳ ತೆರಿಗೆ ನಿಯಮ 2025 ರಲ್ಲಿ ಅವಕಾಶ ಕಲ್ಪಿಸಿದೆ. 2024ರ ಸೆ. 10 ರ ಅಂತ್ಯದವರೆಗೆ ಅನಧಿಕೃತ ಬಡಾವಣೆಗಳಲ್ಲಿ ನಿರ್ವಿುಸಿಕೊಂಡಿರುವ ನಿವೇಶನ ಮತ್ತು ಕಟ್ಟಡಗಳಿಗೆ ಬಿ-ಖಾತೆ ನೀಡಲು ಅವಕಾಶ ಕಲ್ಪಿಸಿಕೊಡಲಾಗಿದೆ. ಇಂತಹ ಪ್ರಕರಣಗಳ ವ್ಯಾಪ್ತಿಗೆ ಬರುವ ಆಸ್ತಿ ಮಾಲೀಕರು ವ್ಯಾಪ್ತಿಯ ಪಪಂಗಳಲ್ಲಿ ದಾಖಲೆಗಳನ್ನು ಸಲ್ಲಿಸಿ ಇ-ಖಾತೆ ಪಡೆಯಬಹುದಾಗಿದೆ ಎಂದು ತಿಳಿಸಿದರು.
ಪಪಂ ಅಧ್ಯಕ್ಷ ನವೀನ್ಕುಮಾರ್, ಮಾಜಿ ಅಧ್ಯಕ್ಷ ಅನ್ವರ್ಸಾಬ್, ಪಪಂ ಸದಸ್ಯ ಲುಕ್ಮಾನ್ಖಾನ್, ಇಂಜಿನಿಯರ್ ಶ್ರುತಿ, ಕಂದಾಯ ನಿರೀಕ್ಷಕ ಮೋಹಿದ್ದೀನ್, ಪಪಂ ಪೌರಕಾರ್ವಿುಕರಾದ ತಿಪ್ಪೇಸ್ವಾಮಿ, ಪರಶುರಾಮ್ ಪರಸಪ್ಪ, ವಿಜಯ್ ಮತ್ತಿತರರಿದ್ದರು.