ರಥಯಾತ್ರೆ ಎರಡು ದಿನ ಸಂಚಾರ

background (5)
ದೇವದುರ್ಗದಲ್ಲಿ ಕರ್ನಾಟಕ ಸಂಭ್ರಮ-50 ರ ರಥಯಾತ್ರೆ ಅಂಗವಾಗಿ ಸೋಮವಾರ ಜನರಿಗೆ ಜಾಗೃತಿ ಮೂಡಿಸಲಾಯಿತು. ಮುಖ್ಯಾಧಿಕಾರಿ ಕೆ.ಹಂಪಯ್ಯ, ಗ್ರೇಡ್-2 ವೆಂಕಟೇಶ, ಪುರಸಭೆ ವ್ಯವಸ್ಥಾಪಕ ಗಂಗಾಧರ್, ಕರವಸೂಲಿಗಾರ ಲಿಂಗನಗೌಡ, ಪ್ರವೀಣ್ ಕುಮಾರ್, ಕಸಾಪ ತಾಲೂಕು ಅಧ್ಯಕ್ಷ ಎಚ್.ಶಿವರಾಜ್, ಶಿವರಾಜ್ ರುದ್ರಾಕ್ಷಿ ಇದ್ದರು.
Published on

ದೇವದುರ್ಗ: ಕರ್ನಾಟಕ ಸಂಭ್ರಮ-50ರ ರಥಯಾತ್ರೆ ಜ್ಯೋತಿ ಡಿ.12ರಂದು ತಿಂಥಣಿ ಬ್ರಿಡ್ಜ್ ಮುಖಾಂತರ ದೇವದುರ್ಗ ತಾಲೂಕಿಗೆ ಪ್ರವೇಶ ಮಾಡಲಿದೆ ಎಂದು ಮುಖ್ಯಾಧಿಕಾರಿ ಕೆ.ಹಂಪಯ್ಯ ಮಾಹಿತಿ ನೀಡಿದರು.

ಡಿ.12ರಂದು ತಿಂಥಣಿ ಬ್ರಿಡ್ಜ್ ಮುಖಾಂತರ ದೇವದುರ್ಗ ತಾಲೂಕಿಗೆ ಪ್ರವೇಶ

ಕರ್ನಾಟಕ ಸಂಭ್ರಮ-50 ರಥಯಾತ್ರೆ ಅಂಗವಾಗಿ ಪುರಸಭೆ ಆವರಣದಲ್ಲಿ ಸೋಮವಾರ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿದರು. ರಥವನ್ನು ತಾಲೂಕು ಆಡಳಿತದಿಂದ ಸ್ವಾಗತಿಸಲಾಗುತ್ತದೆ. ಎರಡು ದಿನ ಯಾತ್ರೆ ಸಂಚಾರ ಮಾಡಲಿದೆ ಎಂದರು.

ಗ್ರೇಡ್-2 ವೆಂಕಟೇಶ, ಪುರಸಭೆ ವ್ಯವಸ್ಥಾಪಕ ಗಂಗಾಧರ್, ಕರವಸೂಲಿಗಾರ ಲಿಂಗನಗೌಡ, ಪ್ರವೀಣ್ ಕುಮಾರ್, ಕಸಾಪ ತಾಲೂಕು ಅಧ್ಯಕ್ಷ ಎಚ್.ಶಿವರಾಜ್, ಶಿವರಾಜ್ ರುದ್ರಾಕ್ಷಿ, ರಂಗಪ್ಪ ಕೋತಿಗುಡ್ಡ, ಮಹಮ್ಮದ್ ಗೌಸ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net