ಮುಖ್ಯಮಂತ್ರಿ ನಿಲುವು ಸ್ವಾಗತಾರ್ಹ : ನಕ್ಸಲ್ ಶರಣಾಗತಿ ಹಿನ್ನೆಲೆ ಸೊರಕೆ ಹೇಳಿಕೆ

New Project (3)
Published on

ಕಡಬ: ನಕ್ಸಲರು ಗನ್ ಹಿಡಿದು ಕಾನೂನು ಉಲ್ಲಂಘನೆ ಮಾಡುತ್ತಿದ್ದರು, ಆದರೆ ಅವರ ಹೋರಾಟ ಅನ್ಯಾಯದ ವಿರುದ್ಧ, ಅಸಹಾಯಕರ ಪರವಾಗಿ ನಡೆಯುತ್ತಿತ್ತು. ಈ ಹಿನ್ನೆಲೆಯಲ್ಲಿ ನಕ್ಸಲರನ್ನು ಮುಖ್ಯವಾಹಿನಿಗೆ ತರುವ ಸಲುವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಪರಮೇಶ್ವರ್ ತೆಗೆದುಕೊಂಡಿರುವ ನಿಲುವು ಸ್ವಾಗತಾರ್ಹವಾದುದು ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ವಿನಯ ಕುಮಾರ್ ಸೊರಕೆ ತಿಳಿಸಿದರು.

ಶನಿವಾರ ಕಡಬದ ನೂಜಿಬಾಳ್ತಿಲದಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾಧ್ಯಮದವರೊಂದಿಗೆ ಮಾತನಾಡಿ, ನಕ್ಸಲರ ಹೋರಾಟ ಅಸಂಘಟಿತರ ಪರವಾಗಿ ಮತ್ತು ಎಲ್ಲರೂ ಒಪ್ಪುವಂತಿತ್ತು. ಆದರೆ ಅವರ ಹೋರಾಟದ ಹಾದಿಯ ಬಗ್ಗೆ ಆಕ್ಷೇಪ ಇತ್ತು. ಇದೀಗ ನಕ್ಸಲ್ ಮುಕ್ತ ಮಾಡುವ ಸಲುವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಪರಮೇಶ್ವರ ಅವರು ಸೂಕ್ತವಾದ ತೀರ್ಮಾನ ತೆಗೆದುಕೊಂಡಿದ್ದಾರೆ. ಇದು ಸ್ವಾಗತಾರ್ಹವಾಗಿದ್ದು, ಈ ಇಬ್ಬರನ್ನೂ ನಾನು ಅಭಿನಂದಿಸುವುದಾಗಿ ಸೊರಕೆ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net