

ಹೆಬ್ರಿ: ನಕ್ಸಲ್ ನಿಗ್ರಹ ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರ ವಹಿಸುವುದರ ಜತೆಗೆ ಸಾಮಾಜಿಕ ಸೇವೆಗೈದಿರುವ ಹೆಬ್ರಿ ನಕ್ಸಲ್ ನಿಗ್ರಹ ದಳದ ಪೊಲೀಸ್ ಇನ್‌ಸ್ಪೆಕ್ಟರ್ ಸತೀಶ್ ಬಿ ಎಸ್, ಸಿಬ್ಬಂದಿ ರಾಘವೇಂದ್ರ, ವಿಟ್ಟೋಬ ಸೀತಾರಾಮ್ ಕೊಲೆಕರ್, ಬಸವರಾಜ್ ಹುಬ್ಬಳ್ಳಿ, ಬಸವರಾಜ್ ಪಲ್ಲೆದ್, ಹಾಗೂ ಗುಪ್ತಚಾರ ವಿಭಾಗದ ಮಹೇಶ್ ಹೆಗಡೆ ಮುಖ್ಯಮಂತ್ರಿ ಪದಕಕ್ಕೆ ಆಯ್ಕೆಯಾಗಿದ್ದಾರೆ. ಪೊಲೀಸ್ ಧ್ವಜ ದಿನಾಚರಣೆ ಕಾರ್ಯಕ್ರಮದಲ್ಲಿ ಪದಕ ಪ್ರದಾನ ನಡೆಯಲಿದೆ.