ಜಯಾನಂದ ಪಟಗಾರಗೆ ಮುಖ್ಯಮಂತ್ರಿ ಪದಕ

Jayananda Patagar Reciving Gold Medal From Home Minister
Published on

ಕುಮಟಾ: ಅಗ್ನಿಶಾಮಕ ಹಾಗೂ ತುರ್ತು ಸೇವೆಗಳ ಇಲಾಖೆಯಲ್ಲಿ ಅಗ್ನಿ ಅವಘಡ ರಕ್ಷಣೆ ಹಾಗೂ ವಿಪತ್ತು ನಿರ್ವಹಣೆಯಲ್ಲಿ ಅಸಾಧಾರಣ ಸೇವೆಗಾಗಿ ನೀಡುವ ಮುಖ್ಯಮಂತ್ರಿಗಳ ಚಿನ್ನದ ಪದಕ ಗೌರವವನ್ನು ತಾಲೂಕಿನ ಬರ್ಗಿ-ಬೆಟ್ಕುಳಿ ನಿವಾಸಿ ಜಯಾನಂದ ನೀಲಪ್ಪ ಪಟಗಾರ ಅವರಿಗೆ ನೀಡಲಾಗಿದೆ.

ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಗೃಹಮಂತ್ರಿ ಜಿ. ಪರಮೇಶ್ವರ ಪದಕ ಪ್ರದಾನ ಮಾಡಿದ್ದಾರೆ. ಜಯಾನಂದ ಪಟಗಾರ ಹಲವು ಜಿಲ್ಲೆಗಳಲ್ಲಿ ಕರ್ತವ್ಯ ನಿರ್ವಹಿಸಿ ಪ್ರಸ್ತುತ ಹೊನ್ನಾವರದ ಅಗ್ನಿಶಾಮಕ ದಳದ ಪ್ರಭಾರ ಠಾಣಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net