ಸವದತ್ತಿ ಯಲ್ಲಮ್ಮನ ದರ್ಶನ ಪಡೆದ ಮುಖ್ಯಮಂತ್ರಿ

Screenshot_2024-10-13-19-15-19-86.jpg
Published on
ಬೆಳಗಾವಿ: ವಿವಿಧ ಕಾಮಗಾರಿಗಳ ಉದ್ಘಾಟನೆಗಾಗಿ, ಸವದತ್ತಿ ಯಲ್ಲಮ್ಮನ ಗುಡ್ಡಕ್ಕೆ ಭಾನುವಾರ ಭೇಟಿ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಯಲ್ಲಮ್ಮದೇವಿ ದರ್ಶನ ಪಡೆದರು. ಅರ್ಚಕರು ನೀಡಿದ್ದ ಲಿಂಬೆಹಣ್ಣುಗಳನ್ನು ದೇವಿಗೆ ಅರ್ಪಿಸಿ ಪ್ರಾರ್ಥಿಸಿದರು. ತಮ್ಮ ಪತ್ನಿ ಪಾರ್ವತಿ ಅವರ ಹೆಸರಲ್ಲೂ ವಿಶೇಷ ಅರ್ಚನೆ ಮಾಡಿಸಿದರು.
ಅರ್ಚಕರು ತಿಲಕ ಕೊಟ್ಟು, ಮಂಗಳಾರತಿ ನೀಡಿ, ದೇವಿಯ ಬೆಳ್ಳಿ ಕಿರೀಟವನ್ನು ಸಿದ್ದರಾಮಯ್ಯ ತಲೆಗೆ ಮುಟ್ಟಿಸಿ ಆಶೀರ್ವಾದಿಸಿದರು. ಈ ವೇಳೆ ಪತ್ನಿ ಪಾರ್ವತಿ, ಧನಿಷ್ಠಾ ನಕ್ಷತ್ರ ಎಂದು ಹೇಳಿದ ಸಿ.ಎಂ, ಪತ್ನಿ ಹೆಸರಲ್ಲೂ ವಿಶೇಷ ಪೂಜೆ ಮಾಡಿಸಿದರು.
ಇದೇ ವೇಳೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರೂ ಸಾಷ್ಟಾಂಗ ನಮಸ್ಕಾರ ಮಾಡಿದರು. ಹತ್ತು ನಿಮಿಷ ಅಲ್ಲೇ ಕುಳಿತು ಪ್ರಾರ್ಥಿಸಿದರು.
ಇದೇ ವೇಳೆ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರಿಗೂ ಅರ್ಚಕರು ಲಿಂಬೆಹಣ್ಣುಗಳನ್ನು ನೀಡಿದರು. ಅವುಗಳನ್ನು ಹಿಡಿದುಕೊಂಡು ದೇವಸ್ಥಾನ ಪ್ರವೇಶಿಸಿದ ಸತೀಶ, ದೇವಿಗೆ ಲಿಂಬೆಹಣ್ಣು ಅರ್ಪಿಸಿದರು.
ಸಚಿವರಾದ ಎಚ್‌.ಕೆ.ಪಾಟೀಲ, ರಾಮಲಿಂಗಾ ರೆಡ್ಡಿ, ಲಕ್ಷ್ಮಿ ಹೆಬ್ಬಾಳಕರ, ಶಾಸಕರಾದ ವಿಶ್ವಾಸ ವೈದ್ಯ, ಬಾಬಾಸಾಹೇಬ ಪಾಟೀಲ, ಭರಮಗೌಡ ಕಾಗೆ, ಆಸೀಫ್ ಸೇರ್, ಎನ್.ಎಚ್.ಕೋನರೆಡ್ಡಿ, ವಿಧಾನ ಪರಿಷತ್‌ ಸದಸ್ಯ ಚನ್ನರಾಜ ಹಟ್ಟಿಹೊಳಿ ಸೇರಿ ಮತ್ತಿತರರು ದೇವಿ ದರ್ಶನ ಪಡೆದರು.
ದೇವಸ್ಥಾನದಿಂದ ಹೊರ ಬಂದ ಸಿದ್ದರಾಮಯ್ಯ ಜನರತ್ತ ಕೈ ಬೀಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net