ಜನ್ಮಾಷ್ಟಮಿ ಮಂಡಲೋತ್ಸವಕ್ಕೆ ಸಿಎಂಗೆ ಆಹ್ವಾನ...

CM
Published on

ಪರ್ಯಾಯ ಪುತ್ತಿಗೆ ಮಠದಿಂದ ಆಮಂತ್ರಣ

ವಿಜಯವಾಣಿ ಸುದ್ದಿಜಾಲ ಉಡುಪಿ

ಆಗಸ್ಟ್​ನಲ್ಲಿ ಉಡುಪಿ ಶ್ರೀಕೃಷ್ಣ ಮಠದಲ್ಲಿ ನಡೆಯಲಿರುವ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಆಯೋಜಿಸಿರುವ 48 ದಿನಗಳ ಮಂಡಲೋತ್ಸವದ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪರ್ಯಾಯ ಪುತ್ತಿಗೆ ಮಠದಿಂದ ಆಹ್ವಾನಿಸಲಾಯಿತು.

ಶ್ರೀಮಠದ ಪರವಾಗಿ ಬೆಂಗಳೂರಿನ ಶಾಖಾ ಮಠದ ಮುಖ್ಯಸ್ಥ ಎ.ಬಿ. ಕುಂಜಾರ್​ ಮತ್ತು ಸುಗುಣೇಂದ್ರ ಶ್ರೀಗಳ ಕಾರ್ಯದರ್ಶಿ ರತೀಶ ತಂತ್ರಿ ಅವರು ಶ್ರೀಕೃಷ್ಣ-ಮುಖ್ಯಪ್ರಾಣರ ಪ್ರಸಾದ ನೀಡಿ ಆಮಂತ್ರಿಸಿದರು.

ಆ.1ರಿಂದ ಸೆ.15ರ ವರೆಗೆ 48 ದಿನಗಳ ಕಾಲ ಮಂಡಲೋತ್ಸವ ನಡೆಯಲಿದ್ದು, ಬಳಿಕ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ ನಡೆಯಲಿದೆ ಎಂದು ಸಿಎಂಗೆ ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net