

ಹುಕ್ಕೇರಿ: ಕರೊನಾ ರೋಗದಿಂದ ದೇಶದಲ್ಲಿ ಲಾಕ್‌ಡೌನ್ ಜಾರಿಯಾಗಿದೆ. ಇದರಿಂದ ನಾಡಿನ ಹಲವಾರು ಜನ ಉದ್ಯೋಗವಿಲ್ಲದೇ ಸಂಕಷ್ಟದಲ್ಲಿದ್ದಾರೆ. ಇಂತಹ ಜನರಿಗೆ ನೆರವಾಗಲು ಹಾಗೂ ಆರ್ಥಿಕ ಪರಿಸ್ಥಿತಿ ಸರಿಪಡಿಸಲು ಪ್ರಾರಂಭಿಸಿರುವ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಸಂಘ ಸಂಸ್ಥೆಗಳು ಆರ್ಥಿಕ ನೆರವಿಗೆ ಮುಂದಾಗಿರುವುದು ಶ್ಲಾಘನೀಯ ಎಂದು ಶಾಸಕ ಉಮೇಶ ಕತ್ತಿ ಹೇಳಿದರು.
ಅವರು ಶುಕ್ರವಾರ ತಾಲೂಕಿನ ಬೆಲ್ಲದ ಬಾಗೇವಾಡಿಯ ಅವರ ಮನೆಯಲ್ಲಿ ಸಂಕೇಶ್ವರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಪದಾಧಿಕಾರಿಗಳು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಕೊಡಮಾಡಿದ 5 ಲಕ್ಷ ರೂ. ಚೆಕ್ ಸ್ವೀಕರಿಸಿ ಮಾತನಾಡಿದರು. ಮಾರುಕಟ್ಟೆ ಸಮಿತಿಯಿಂದ ನೀಡಿರುವ ಪರಿಹಾರ ಮೊತ್ತವನ್ನು ಮುಖ್ಯಮಂತ್ರಿಗಳಿಗೆ ತಲುಪಿಸುವುದಾಗಿ ತಿಳಿಸಿದರು. ಮಾರುಕಟ್ಟೆ ಸಮಿತಿ ಅಧ್ಯಕ್ಷ ಕೆ.ಜಿ. ಪಾಟೀಲ ಮತ್ತು ನಿರ್ದೇಶಕ ಭೀಮಸೇನ ಬಾಗಿ ಮಾತನಾಡಿ, ಶಾಸಕದ್ವಯರಾದ ಉಮೇಶ ಕತ್ತಿ, ಸತೀಶ ಜಾರಕಿಹೊಳಿ, ಮಾಜಿ ಸಂಸದ, ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ಅವರ ಸಲಹೆ ಮೇರೆಗೆ ಸಭೆ ಸೇರಿ 5 ಲಕ್ಷ ರೂ. ಪರಿಹಾರ ನಿಧಿಗೆ ಅರ್ಪಿಸುತ್ತಿದ್ದೇವೆ ಎಂದರು. ಸಮಿತಿ ಉಪಾಧ್ಯಕ್ಷ ದಯಾನಂದ ಪಾಟೀಲ, ನಿರ್ದೇಶಕರಾದ ಪ್ರಶಾಂತ ಪಾಟೀಲ, ಮಹಾನಿಂಗ ಸನದಿ, ಕಲ್ಲಣ್ಣ ಚೌಗಲಾ, ಸುನೀಲ ಪರ್ವತರಾವ, ವಿಜಯ ಶೇರೆಕರ, ಜಯಶ್ರೀ ಖೋತ, ಮಾರುತಿ ಗಸ್ತಿ, ಭರಮಗೌಡ ಪಾಟೀಲ, ನಾಗರಾಜ ದಡ್ಡಿ, ಸವಿತಾ ಪಾಟೀಲ, ಬಸಪ್ಪ ತಳವಾರ, ಕಾರ್ಯದರ್ಶಿ ಬಿ.ಎಸ್. ರಡ್ಡಿ ಮತ್ತಿತರರಿದ್ದರು.
ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ನೀಡಿರುವ ನಿರ್ದೇಶನದಂತೆ ಜನರು ಸ್ವಯಂ ಗೃಹಬಂಧನ ನಿಯಮ ಪಾಲಿಸಬೇಕು. ಈ ಮೂಲಕ ಮಾಹಾಮಾರಿ ಕರೊನಾ ನಿಯಂತ್ರಣಕ್ಕೆ ಸಹಕರಿಸಬೇಕು.| ಉಮೇಶ ಕತ್ತಿ ಶಾಸಕ