

ನರೇಗಲ್ಲ: ಪೌರ ಕಾಮಿರ್ಕರು ನೈಜ ಕಾಯಕಯೋಗಿಗಳು. ಸ್ವಚ್ಛತಾ ರೂವಾರಿಗಳು ಎಂದು ಮುಖ್ಯಾಧಿಕಾರಿ ಮಹೇಶ ನಿಡಶೇಶಿ ಹೇಳಿದರು.
ಪಟ್ಟಣ ಪಂಚಾಯಿತಿ ಆವರಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ 14ನೇ ವರ್ಷದ ಪೌರ ಕಾಮಿರ್ಕ ದಿನಾಚರಣೆಯಲ್ಲಿ ಮಾತನಾಡಿದ ಅವರು, ಆರೋಗ್ಯ ರ್ಪೂಣ ಸಮಾಜ ನಿರ್ಮಾಣಕ್ಕೆ ತ್ಯಾಗ, ಸೇವೆ, ಸಮರ್ಪಣೆ, ಕಾರುಣ್ಯದಿಂದ ಸದಾ ಜೀವ ತೇಯುತ್ತಿರುವ ಪೌರಕಾಮಿರ್ಕರನ್ನು ಗೌರವಿಸಬೇಕು ಎಂದು ತಿಳಿಸಿದರು.
ಜಿಲ್ಲಾಧ್ಯಕ್ಷ ರಮೇಶ ಹಲಗಿ ಮಾತನಾಡಿ, ಪೌರ ಕಾಮಿರ್ಕರಿಗೆ ಸಲ್ಲಬೇಕಾದ ಸವಲತ್ತುಗಳು, ಸೌಕರ್ಯಗಳು ಸಿಗುತ್ತಿಲ್ಲ. ಸರ್ಕಾರ ಇನ್ನಾದರೂ ಸವಲತ್ತು ನೀಡಬೇಕೆಂದು ಒತ್ತಾಯಿಸಿದರು.
ಉಪನ್ಯಾಸಕ ಎ.ಎಸ್. ಹೊನ್ನೂರ ಉಪನ್ಯಾಸ ನೀಡಿದರು. ಪ.ಪಂ ಅಧ್ಯಕ್ಷ ಫಕೀರಪ್ಪ ಮಳ್ಳಿ, ಉಪಾಧ್ಯಕ್ಷ ಕುಮಾರಸ್ವಾಮಿ ಕೋರಧಾನ್ಯಮಠ, ಸ್ಥಾಯಿ ಕಮಿಟಿ ಚೇರಮನ್ ಮುತ್ತಪ್ಪ ನೂಲ್ಕಿ, ಸದಸ್ಯರಾದ ದಾವುದ ಅಲಿ ಕುದರಿ, ಮಲ್ಲಿಕಾರ್ಜುನಗೌಡ ಭೂಮನಗೌಡ್ರ, ಈರಪ್ಪ ಜೋಗಿ, ವಿಜಯಲಕ್ಷಿ$್ಮ ಚಲವಾದಿ, ಜ್ಯೋತಿ ಪಾಯಪ್ಪಗೌಡ್ರ, ಅಕ್ಕಮ್ಮ ಮಣ್ಣೊಡ್ಡರ, ಬಸೀರಾಬಾನು ನದಾಫ, ಮೈಲಾರಪ್ಪ ಗೋಡಿ, ನಿಂಗನಗೌಡ ಲಕ್ಕನಗೌಡ್ರ, ಶೇಖಪ್ಪ ಕೇಂಗಾರ, ಸಕ್ರಪ್ಪ ಹಡಪದ, ಶಂಕ್ರಪ್ಪ ದೊಡ್ಡಣ್ಣವರ, ನೀಲಪ್ಪ ಚಳ್ಳಮರದ, ಆರೀಫ ಮಿರ್ಜಾ ಸೇರಿದಂತೆ ಪೌರ ಕಾಮಿರ್ಕರು ಸಿಬ್ಬಂದಿ ಇದ್ದರು.