ಮಾ.30ರವರೆಗೆ ಮಾತ್ರ ಕಾಲುವೆಗೆ ನೀರು

21-03kodekal03
Published on

ಕೊಡೇಕಲ್ : ಕೃಷ್ಣಾ ಅಚ್ಚುಕಟ್ಟು ಪ್ರದೇಶದ ಹಿಂಗಾರು ಹಂಗಾಮಿನ ಬೆಳೆಗಳಿಗೆ ನಾರಾಯಣಪುರ ಎಡದಂಡೆ, ಬಲದಂಡೆ ಸೇರಿ ರಾಂಪೂರ ಏತ ನೀರಾವರಿ ಮುಖ್ಯ ಕಾಲುವೆ ಜಾಲಗಳಿಗೆ ಮಾ.21 ಶನಿವಾರ ಬೆಳಗ್ಗೆಯಿಂದಲೆ ನೀರು ಹರಿಸಲಾಗುತ್ತಿದೆ ಎಂದು ಪ್ರಭಾರಿ ಮುಖ್ಯ ಇಂಜನಿಯರ್ ಎಸ್. ರಂಗರಾಮ್ ತಿಳಿಸಿದ್ದಾರೆ.

ನೀರಾವರಿ ಸಲಹಾ ಸಮಿತಿಯ ಅಧ್ಯಕ್ಷರು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ನಿದರ್ೇಶನದ ಮೇರೆಗೆ ಆಲಮಟ್ಟಿ ಮತ್ತು ನಾರಾಯಣಪುರ ಉಭಯ ಜಲಾಶಯಗಳಲ್ಲಿ ನೀರಾವರಿಗಾಗಿ ಮೀಸಲಿಟ್ಟಿದ್ದ 10 ಟಿಎಂಸಿ ಅಡಿ ನೀರನ್ನು ಎಲ್ಲಿಯವರೆಗೆ ಹರಿಸಬಹುದು ಎಂಬುದರ ಕುರಿತು ಕೃಷ್ಣಾ ಭಾಗ್ಯ ಜಲ ನಿಗಮದ ನಾಲ್ಕು ವಲಯಗಳ ಮುಖ್ಯ ಇಂಜನಿಯರ್ಗಳ ಸಭೆ ನಡೆಸಿ ಮಾ.21 ರಿಂದ ಮಾ.30ರ ವರಗೆ ನಿರಂತರವಾಗಿ ಕಾಲುವೆಗಳಿಗೆ ನೀರು ನಿರ್ಧಸಲಾಯಿತು.

ಅದರಂತೆ ಆಲಮಟ್ಟಿ ಅಚ್ಚುಕಟ್ಟು ಪ್ರದೇಶದ ಜಮೀನುಗಳಿಗೆ 1 ಟಿಎಂಸಿ ಅಡಿ ಹಾಗೂ ನಾರಾಯಣಪುರ ಅಚ್ಚುಕಟ್ಟು ಭಾಗದ ಜಮೀನುಗಳಿಗೆ 9 ಟಿಎಂಸಿ ಅಡಿಯಷ್ಟು ನೀರನ್ನು ಹರಿಸಲು ತೀರ್ಮಾನಿಸಿ ಸರ್ಕಾರದ ಸೂಚನೆಯನ್ನು ಪಾಲನೆ ಮಾಡಲಾಗಿದೆ. ರೈತ ಬಾಂಧವರು ಕಾಲುವೆ ನೀರು ಪೋಲಾಗದಂತೆ ನೋಡಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

ಕೃಷ್ಣಾ ಅಚ್ಚುಕಟ್ಟು ಭಾಗದ ಫಲಾನುಭವಿ ಜಿಲ್ಲೆಗಳ ಜನಪ್ರತಿನಿಧಿಗಳು ಸೇರಿದಂತೆ ರೈತ ಪರ ಸಂಘಟನೆಗಳು ಪ್ರಸ್ತುತ ಹಿಂಗಾರು ಹಂಗಾಮಿನ ಬೆಳೆಗಳಿಗೆ ಏ.10 ರವರೆಗೆ ಕಾಲುವೆಗಳಿಗೆ ನೀರು ಹರಿಸುವಂತೆ ಸರ್ಕಾರವನ್ನು ಒತ್ತಾಯ ಮಾಡಿದ್ದನ್ನು ಸ್ಮರಿಸಬಹುದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net