ಚಿದಾನಂದ ಬಸಪ್ರಭು ಕೋರೆ ಸಕ್ಕರೆ ಕಾರ್ಖಾನೆ ಪ್ರಶಸ್ತಿ ಗರಿ

19ckd5
ಚಿಕ್ಕೋಡಿ ಸಿ.ಬಿ.ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆಯ ಸಹ ವಿದ್ಯುತ್​ ಟಕಕ್ಕೆ ಸುಸ್ಥಿರ ಕಾರ್ಯನಿರ್ವಹಣೆಯ ವಿಶೇಷ ವರ್ಗ ಪ್ರಶಸ್ತಿಯನ್ನು ರಾಜ್ಯಸಭೆ ಸದಸ್ಯ ಶರದ ಪವಾರ ಹಾಗೂ ಸಹಕಾರ ಸಚಿವ ಹರ್ಷವರ್ಧನ ಪಾಟೀಲ ಅವರು ಕಾರ್ಖಾನೆಯ ಅಧ್ಯಕ್ಷ ಮಲ್ಲಿಕಾರ್ಜುನ ಕೋರೆ ಅವರಿಗೆ ನೀಡಿ ಗೌರವಿಸಿದರು.
Published on

ಚಿಕ್ಕೋಡಿ: ಚಿಕ್ಕೋಡಿ ಚಿದಾನಂದ ಬಸಪ್ರಭು ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆಯ ಸಹ ವಿದ್ಯುತ್​ ಟಕಕ್ಕೆ ಪುಣೆಯ ಕೋ&ಜನರೇಶನ್​ ಅಸೋಸಿಯೇಶನ್​ ಆಫ್​ ಇಂಡಿಯಾ ಪ್ರತಿವರ್ಷ ನೀಡುವ ಸಹಕಾರ ವಿಭಾಗದ 80ರೊಳಗಿನ ಬಾರ್​ ಪ್ರೆಶರ್​ ವಿಭಾಗದಲ್ಲಿನ ಸುಸ್ಥಿರ ಕಾರ್ಯನಿರ್ವಹಣೆಯ ವಿಶೇಷ ವರ್ಗ ಪ್ರಶಸ್ತಿ ಸಂದಿದೆ.

ಪುಣೆಯಲ್ಲಿ ಈಚೆಗೆ ಜರುಗಿದ ಸಮಾರಂಭದಲ್ಲಿ ರಾಜ್ಯಸಭಾ ಸದಸ್ಯ ಹಾಗೂ ಮಾಜಿ ಕೇಂದ್ರ ಕೃಷಿ ಸಚಿವ ಶರದ ಪವಾರ, ಮಹಾರಾಷ್ಟ್ರ ಸಹಕಾರ ಸಚಿವ ಬಾಬಾಸಾಹೇಬ ಪಾಟೀಲ, ರಾ.ಸ.ಸ.ಕಾ.ನಿ., ಹೊಸದೆಹಲಿ ಅಧ್ಯಕ್ಷ ಹರ್ಷವರ್ಧನ ಪಾಟೀಲ ಹಾಗೂ ಕೋ&ಜನರೇಶನ್​ ಅಸೋಸಿಯೇಶನ್​ ಆಫ್​ ಇಂಡಿಯಾ ಪುಣೆ ಇದರ ಉಪಾಧ್ಯಕ್ಷ ಜಯಪ್ರಕಾಶ ಸಾಳುಂಕೆ ದಾಂಡೆಗಾಂವಕರ ಕಾರ್ಖಾನೆ ಅಧ್ಯಕ್ಷ ಮಲ್ಲಿಕಾರ್ಜುನ ಕೋರೆ ಹಾಗೂ ಆಡಳಿತ ಮಂಡಳಿ ಸದಸ್ಯರಿಗೆ ಪ್ರಶಸ್ತಿ ಪ್ರದಾನ ಮಾಡಿದರು.

ಹೆಚ್ಚಿದ ಕಾರ್ಖಾನ ಗೌರವ

ಸಕ್ಕರೆ ಉದ್ಯಮದಲ್ಲಿನ ಸಹ&ವಿದ್ಯುತ್​ ಉಪ ಉತ್ಪಾದನಾ ಟಕಗಳ ಕುರಿತು ವಿಶೇಷ ಅಧ್ಯಯನ, ತಾಂತ್ರಿಕತೆ ಅಭಿವೃದ್ಧಿ ಹಾಗೂ ವಿವಿಧ ವಿಷಯಗಳ ಮಾಹಿತಿ ಶಿಬಿರ ಏರ್ಪಡಿಸುವ ಮೂಲಕ ಸಕ್ಕರೆ ಉದ್ಯಮಕ್ಕೆ ಅಮೂಲ್ಯ ಕೊಡುಗೆ ಮತ್ತು ಪೋತ್ಸಾಹ ನೀಡುತ್ತಿರುವ ಪುಣೆಯ ಕೋ&ಜನರೇಶನ್​ ಅಸೋಸಿಯೇಶನ್​ ಆಫ್​ ಇಂಡಿಯಾ ಇವರು ಭಾರತದಲ್ಲಿನ ಎಲ್ಲ ಸಹಕಾರಿ ಮತ್ತು ಖಾಸಗಿ ಸಕ್ಕರೆ ಕಾರ್ಖಾನೆಗಳಿಗೆ ಪ್ರತಿವರ್ಷದ ಕಾರ್ಯನಿರ್ವಹಣೆಯ ಮಾನದಂಡಗಳ ಮೌಲ್ಯಮಾಪನ ಮಾಡಿ ಉತ್ತಮ ಕಾರ್ಯನಿರ್ವಹಿಸಿದ ಕಾರ್ಖಾನೆಗಳಿಗೆ ಈ ಪ್ರಶಸ್ತಿ ನೀಡಿ ಗೌರವಿಸುತ್ತದೆ. ಈ ಬಾರಿ ಚಿಕ್ಕೋಡಿ ಚಿದಾನಂದ ಬಸಪ್ರಭು ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆಗೆ ನೀಡುವುದು ಕಾರ್ಖಾನೆಯ ಗೌರವ ಮತ್ತಷ್ಟು ಹೆಚ್ಚಿಸಿದೆ.

ವಂಜಿರೆಗೂ ಪ್ರಶಸ್ತಿ

ಇನ್ನೂ ಕಾರ್ಖಾನೆಯ ಡಿ.ಎಮ್​.ಪ್ಲಾಂಟ್​ ವ್ಯವಸ್ಥಾಪಕ ಸಾಗರ ತುಕಾರಾಮ ವಂಜಿರೆ ಇವರಿಗೆ ಅತ್ಯುತ್ತಮ ಡಿ.ಎಮ್​.ಪ್ಲಾಂಟ್​ ವ್ಯವಸ್ಥಾಪಕ ಪ್ರಶಸ್ತಿ ನೀಡಿ ಗೌರವಿಸಿದೆ.

ಕಾರ್ಖಾನೆಯ ಉಪಾಧ್ಯಕ್ಷರಾದ ತಾತ್ಯಾಸಾಹೇಬ ಕಾಟೆ, ನಿರ್ದೇಶಕರುಗಳಾದ ಅಜಿತ್​ ದೇಸಾಯಿ, ಪರಸಗೌಡಾ ಪಾಟೀಲ, ಸಂದೀಪ ಪಾಟೀಲ, ಮಲ್ಲಪ್ಪ ಮೈಶಾಳೆ, ಚೇತನ ಪಾಟೀಲ, ಮಹಾವೀರ ಕಾತ್ರಾಳೆ, ಭೀಮಗೌಡಾ ಪಾಟೀಲ, ಅಣ್ಣಾಸಾಬ ಇಂಗಳೆ ಹಾಗೂ ವ್ಯವಸ್ಥಾಪಕ ನಿರ್ದೇಶಕ ಡಾ.ಆರ್​.ಬಿ.ಖಾಂಡಗಾವೆ, ಮುಖ್ಯ ಲೆಕ್ಕಾಧಿಕಾರಿ ಐ.ಎನ್​.ಗೊಲಭಾವಿ ಮತ್ತು ಸಹ&ವಿದ್ಯುತ್​ ಟಕದ ಪ್ರಧಾನ ವ್ಯವಸ್ಥಾಪಕ ಎನ್​.ಎಮ್​.ಮಾಗಿ ಪ್ರಶಸ್ತಿ ಸ್ವೀಕರಿಸಿದರು.

ಕಾರ್ಖಾನೆಯ ಅಧ್ಯಕ್ಷ ಮಲ್ಲಿಕಾರ್ಜುನ ಕೋರೆ ಮಾತನಾಡಿ, ಕಾರ್ಖಾನೆಯ ರೂವಾರಿಗಳಾದ ಡಾ.ಪ್ರಭಾಕರ ಕೋರೆ ಇವರ ಮಾರ್ಗದರ್ಶನ ಹಾಗೂ ಕಾರ್ಖಾನೆ ಸಂಚಾಲಕ ಅಮಿತ್​ ಪ್ರಭಾಕರ ಕೋರೆ ನೇತೃತ್ವ, ಆಡಳಿತ ಮಂಡಳಿಯ ಸೂಕ್ತ ರ್ನಿಣಯ, ರೈತರ ಸಹಕಾರ ಮತ್ತು ಅಧಿಕಾರಿ ಹಾಗೂ ಕಾರ್ಮಿಕರ ಸತತ ಪ್ರಯತ್ನದ ಫಲವಾಗಿ 2024&25ರ ಹಂಗಾಮಿನಲ್ಲಿ ಕಾರ್ಖಾನೆಯು 102 ದಿನಗಳಲ್ಲಿ 9,98,408.066 ಮೆ.ಟನ್​ ಕಬ್ಬು ನುರಿಸಿ ಕಡಿಮೆ ದಿನಗಳಲ್ಲಿ ಹೆಚ್ಚು ಕಬ್ಬು ನುರಿಸಿ ಯಶಸ್ವಿಯಾಗಿ ಹಂಗಾಮು ಪೂರ್ಣಗೊಳಿಸಿದೆ. ಕಾರ್ಖಾನೆಯ ಉಪ ಉತ್ಪನ್ನ ಟಕಗಳಾದ ಸಹವಿದ್ಯುತ್​ ಮತ್ತು ಡಿಸ್ಟಿಲರಿ ಟಕಗಳು ಸಹ ಕಳೆದ ಹಂಗಾಮಿನಲ್ಲಿ ಉತ್ತಮ ರೀತಿಯಲ್ಲಿ ಪೂರ್ಣ ಕ್ಷಮತೆಯೊಂದಿಗೆ ಕಾರ್ಯನಿರ್ವಹಿಸಿವೆ ಎಂದು ತಿಳಿಸಿದರು.

ಕಳೆದ ಹಂಗಾಮಿನಲ್ಲಿ ಕಾರ್ಖಾನೆಯ ಎಲ್ಲ ಟಕಗಳು ಪೂರ್ಣ ಕ್ಷಮತೆಯೊಂದಿಗೆ ಕಾರ್ಯನಿರ್ವಹಿಸಿದ್ದಕ್ಕೆ ಕಾರ್ಖಾನೆ ಈ ಪ್ರಶಸ್ತಿ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಈ ಪ್ರಶಸ್ತಿಯ ಶ್ರೇಯಸ್ಸು ಕಾರ್ಖಾನೆಯ ಸದಸ್ಯ, ಕಬ್ಬು ಪೂರೈಸಿದ ಸಮಸ್ತ ರೈತ ಬಾಂಧವರಿಗೂ ಹಾಗೂ ಕಾರ್ಮಿಕ ವರ್ಗದವರಿಗೂ ಸಲ್ಲುತ್ತದೆ. ಅಮಿತ್​ ಪ್ರಭಾಕರ ಕೋರೆ, ನಿರ್ದೇಶಕರು ಹಾಗೂ ಕಾರ್ಖಾನೆಯ ಸಂಚಾಲಕರು, ರಾಷ್ಟ್ರೀಯ ಸಹಕಾರಿ ಸಕ್ಕರೆ ಕಾರ್ಖಾನೆಗಳ ಮಹಾಮಂಡಳಿ ನಿ., ಹೊಸದೆಹಲಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net