

ಹುಬ್ಬಳ್ಳಿ: ಪರಸ್ಪರ ಸಹಕಾರ ಹಾಗೂ ನಂಬಿಕೆಯ ಅಮೂಲ್ಯ ತತ್ವಗಳ ಬುನಾದಿಯ ಮೇಲೆ ಅಸ್ತಿತ್ವಕ್ಕೆ ಬಂದ ಸಹಕಾರಿ ಕ್ಷೇತ್ರದಲ್ಲಿ ಪ್ರಾಮಾಣಿಕ ನಿರ್ವಹಣೆಯಿಂದ ಸಮೃದ್ಧಿ ಸಾಧ್ಯ ಎಂದು ಕವಿವಿ ವಿಶ್ರಾಂತ ಕುಲಪತಿ ಡಾ. ಪ್ರಮೋದ ಗಾಯಿ ಹೇಳಿದರು.
ನಗರದ ಆರ್.ಎನ್. ಶೆಟ್ಟಿ ಕಲ್ಯಾಣ ಮಂಟಪದಲ್ಲಿ ಭಾನುವಾರ ಏರ್ಪಡಿಸಿದ್ದ ಶ್ರೀ ಚಿದಂಬರ ಸೌಹಾರ್ದ ಪತ್ತಿನ ಸಹಕಾರಿ ನಿಯಮಿತದ ದಶಮಾನೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ಸ್ವಾತಂತ್ರ್ಯ ಪೂರ್ವದಲ್ಲಿಯೇ ಭಾರತದಲ್ಲಿ ಸಹಕಾರಿ ತಳಹದಿಯಲ್ಲಿ ಸಣ್ಣ ಹಿಡುವಳಿದಾರರಿಗೆ ಆಥಿರ್ಕ ನೆರವಿನ ಚಟುವಟಿಕೆ 1904ರಲ್ಲಿ ಆರಂಭವಾಗಿದೆ. ಇಂದು ಈ ಕ್ಷೇತ್ರವು ಬೃಹತ್ ಪ್ರಮಾಣದಲ್ಲಿ ಬೆಳೆದಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಸೌಹಾರ್ದದ ಅಧ್ಯಕ್ಷ ಜಿ.ಕೆ. ಕುಲಕಣಿರ್ ಮಾತನಾಡಿ, ಸಂಘವು ಠೇವಣಿ- ಸಾಲ ಸೇರಿ 159 ಕೋಟಿ ರೂ. ವ್ಯವಹಾರ ನಡೆಸುತ್ತಿದೆ. 17 ಸಾವಿರ ಸದಸ್ಯರನ್ನು ಹೊಂದಿದ್ದು, 3.56 ಕೋಟಿ ರೂ. ಶೇರು ಬಂಡವಾಳ ಸಂಗ್ರಹಿಸಿದೆ ಹಾಗೂ ಶೇ. 13 ಡಿವಿಡೆಂಡ್ ನೀಡಲಾಗಿದೆ ಎಂದರು.
ಸೌಹಾರ್ದದ ಉಪಾಧ್ಯಕ್ಷ ಅರವಿಂದ ಪೂಜಾರ, ಜನರಲ್ ಮ್ಯಾನೇಜರ್ ಮುರಳೀಧರ ಮಾತನಾಡಿದರು.
ಪಂ. ವೆಂಕಟನರಸಿಂಹಾಚಾರ್ಯ ಜೋಶಿ ಅಭಿಪ್ರಾಯ ವ್ಯಕ್ತಪಡಿಸಿದರು. ಆಡಳಿತ ಮಂಡಳಿ ಸದಸ್ಯರಾದ ಪ್ರಭಾಕರ ಕುಲಕರ್ಣಿ, ವಿ.ಎಂ. ಪೂಜಾರ, ಡಿ.ಜಿ.ಎಂ. ಕೃಷ್ಣಾನಂದ ಅಗಡಿ ಉಪಸ್ಥಿತರಿದ್ದರು.
ಹರೀಶ ಬೊಮ್ಮನಹಳ್ಳಿ ಪ್ರಾಥಿರ್ಸಿದರು. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಂಜುನಾಥ್ ಕುಲಕಣಿರ್ ಸ್ವಾಗತಿಸಿದರು. ಎ.ಜಿ.ಎಂ. ನಾರಾಯಣ ನರಗುಂದ ವಂದಿಸಿದರು. ಪ್ರಹ್ಲಾದ ಪರ್ವತಿ ಕಾರ್ಯಕ್ರಮ ನಿರ್ವಹಿಸಿದರು.