ಚಿದಂಬರ ಚರಿತ್ರೆ ಪಾರಾಯಣ ಸಂಪನ್ನ

13Huk1
Published on

ಹುಕ್ಕೇರಿ: ಪಟ್ಟಣದ ವಿಠ್ಠ ಮಂದಿರದಲ್ಲಿ ಶಿವಚಿದಂಬರ ಸೇವಾ ಸಮಿತಿ ಮತ್ತು ಸ್ಥಳೀಯ ಬ್ರಾಹ್ಮಣ ಸಮುದಾಯದ ವತಿಯಿಂದ ಅ.9ರಿಂದ 12ರ ವರೆಗೆ ಹಮ್ಮಿಕೊಂಡಿದ್ದ ಚಿದಂಬರ ಚರಿತ್ರೆ ಪಾರಾಯಣ ಮಹೋತ್ಸವ ಭಾನುವಾರ ಸಂಪನ್ನಗೊಂಡಿತು.

ನಿವೃತ್ತ ಪ್ರಾಚಾರ್ಯ ರಾಜೇಂದ್ರ ಠಾಕೂರ ಅವರಿಂದ ಪಾರಾಯಣ, ಹನುಮಂತ ಚಿಪ್ಪಲಕಟ್ಟಿ ಅವರಿಂದ ಸಂಸ್ಕೃತಿ ಮತ್ತು ಅಧ್ಯಾತ್ಮ ಚಿಂತನೆ, ಗುರ್ಲಹೊಸೂರಿನ ನಟೇಶ ದೀಕ್ಷಿತ ಅವರಿಂದ ಪಾರಾಯಣ ಜರುಗಿತು. ಡಾ.ರಾಜೀವ್ ಕುಲಕರ್ಣಿ ಮತ್ತು ಶ್ರೀಕಾಂತ ಜೋಶಿ ದಂಪತಿ ಪೂಜೆಯಲ್ಲಿ ಪಾಲ್ಗೊಂಡಿದ್ದರು. ನಟೇಶ ದೀಕ್ಷಿತ ಮಾತನಾಡಿದರು.

ಹಿರಿಯ ವಕೀಲ ರಾಮಚಂದ್ರ ಜೋಶಿ, ಆನಂದ ನಾಡಗೌಡ, ಪತ್ರಕರ್ತ ಸಂಜೀವ ಮುತಾಲಿಕ, ಡಿ.ಎಲ್.ಕುಲಕರ್ಣಿ, ಸುಧಾತಾಯಿ ಕುಲಕರ್ಣಿ, ಗೋವಿಂದ ಮುತಾಲಿಕ, ಶ್ರೀಪಾದ ಜೋಶಿ, ಹನುಮಂತ ಚಿಪ್ಪಲಕಟ್ಟಿ, ಸರ್ವೇಶ ಜಕಾತಿ, ದತ್ತಾತ್ರೆಯ ಕುಲಕರ್ಣಿ, ಮಿಲಿಂದ ಕುಲಕರ್ಣಿ, ಮಾಧವ ದೇಶಪಾಂಡೆ, ನಿವೃತ್ತ ಶಿಕ್ಷಕ ಸುರೇಶ ಬುರ್ಜಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net