ಕಾಲೇಜಿನಲ್ಲಿ ಕೋಳಿ ಕಜ್ಜಾಯ ಗದ್ದಲ!

8sgr1
ಸಾಗರದ ಇಂದಿರಾಗಾAಽ ಮಹಿಳಾ ಪ್ರಥಮದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಆಹಾರ ಮೇಳ.
Published on

ಸಾಗರ: ಸಾಗರದ ಶ್ರೀಮತಿ ಇಂದಿರಾಗಾAಽ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಕಲಾ ವಿಭಾಗದಲ್ಲಿ ಸೋಮವಾರ ಆಯೋಜಿಸಿದ್ದ ಆಹಾರ ಮೇಳಕ್ಕೆ ವಿದ್ಯಾರ್ಥಿನಿಯರು ಮಾಂಸಾಹಾರ ತಂದಿದ್ದರಿAದ ಗೊಂದಲ ಸೃಷ್ಟಿಯಾಗಿತ್ತು.
ಆಹಾರ ಮೇಳಕ್ಕೆ ಕಾಲೇಜಿನ ಇಬ್ಬರು ವಿದ್ಯಾರ್ಥಿನಿಯರು ಮಲೆನಾಡಿನ ಸಾಂಪ್ರದಾಯಿಕ ಮಾಂಸಾಹಾರ ಕೋಳಿಕಜ್ಜಾಯ, ರೊಟ್ಟಿ ಇತರ ತಿನಿಸುಗಳನ್ನು ತಂದಿದ್ದರು. ಕಾಲೇಜಿನ ಕೆಲ ಉಪನ್ಯಾಸಕರು ಮಾಂಸಾಹಾರಕ್ಕೆ ಕಾಲೇಜಿನಲ್ಲಿ ಪ್ರವೇಶವಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಕಾರ್ಯಕ್ರಮಕ್ಕೂ ಮುನ್ನ ಮಾಂಸಾಹಾರ ತಿನಿಸುಗಳಿಗೆ ಅವಕಾಶ ಇಲ್ಲವೆಂಬ ಸೂಚನೆಯನ್ನೂ ನೀಡಲಾಗಿದೆ. ಆದರೆ ವಿದ್ಯಾರ್ಥಿಗಳು ನಿಯಮವನ್ನು ಉಲ್ಲಂಘಿಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಾರ್ಯಕ್ರಮವನ್ನು ಆಯೋಜಿಸುವಾಗ ಮಾಂಸಾಹಾರದ ತಿನಿಸುಗಳಿಗೆ ಅವಕಾಶವಿಲ್ಲವೆಂದು ಸೂಚನೆಯನ್ನೂ ನೀಡಲಾಗಿದೆ. ಆದರೆ ವಿದ್ಯಾರ್ಥಿನಿಯರು ನಿಯಮ ಉಲ್ಲಂöಸಿದ್ದಾರೆ. ಯವುದೇ ಕಾರಣಕ್ಕೂ ಮಾಂಸಾಹಾರದ ತಿನಿಸುಗಳನ್ನು ಆಹಾರ ಮೇಳದಲ್ಲಿ ಇಡದಂತೆ ಉಪನ್ಯಾಸಕರು ಹೇಳುತ್ತಿರುವ ವಿಚಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆದರೆ ವಿದ್ಯಾರ್ಥಿನಿಯರು ಶೇ.90 ಮಾಂಸಾಹಾರವನ್ನು ಸೇವಿಸುವವರಿದ್ದೇವೆ. ಅದಕ್ಕಾಗಿ ಮಾಂಸಾಹಾರ ತಂದಿದ್ದೇವೆ ಎಂದು ವಾದ ಮುಂದಿಟ್ಟಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಈ ಸುದ್ದಿ ಚರ್ಚೆಯಾಗುತ್ತಿದ್ದಂತೆ ಅಂತಿಮವಾಗಿ ಆಹಾರ ಮೇಳದಲ್ಲಿ ಮಾಂಸಾಹಾರಕ್ಕೂ ಅವಕಾಶ ನೀಡಲಾಯಿತು. ಸುಮಾರು ೬ ನಿಮಿಷಗಳ ವಾಗ್ವಾದ ಮತ್ತು ಚರ್ಚೆ ಸಾಮಾಜಿಕ ಜಾಲತಾಣದಲ್ಲಿ ಬಿತ್ತರಗೊಂಡಿದೆ. ಘಟನೆ ಕುರಿತಂತೆ ಮಂಗಳವಾರ ಕಾಲೇಜಿನ ಪ್ರಾಚಾರ್ಯೆ ರಾಜೇಶ್ವರಿ ಮಾತನಾಡಿ, ಆಹಾರ ಮೇಳದಲ್ಲಿ ಈ ಮೊದಲೇ ಒಂದು ನಿಯಮವನ್ನು ಇಟ್ಟುಕೊಂಡಿದ್ದರಿAದ ಮಾಂಸಾಹಾರಕ್ಕೆ ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದರೆ ಹೊರತು ಮಾಂಸಾಹಾರ ಪದಾರ್ಥಗಳನ್ನು ಒಳಗೊಂಡAತೆ ಆಹಾರಮೇಳ ನಡೆಸಲು ಯಾವುದೇ ಆಕ್ಷೇಪಗಳಿಲ್ಲ. ಅದಕ್ಕೂ ಅವಕಾಶ ಕಲ್ಪಿಸುತ್ತೇವೆ. ಇದಕ್ಕೆ ಬೇರೆ ಅರ್ಥವನ್ನು ಕಲ್ಪಿಸಬೇಡಿ. ಮೇಳದಲ್ಲಿ ಅವರಿಗೂ ಅವಕಾಶ ಮಾಡಿಕೊಡಲಾಯಿತು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net