ಚೀಕಲಪರ್ವಿ ಕ್ಯಾಂಪ್‌ನಲ್ಲಿ ಅನಧಿಕೃತ ಹತ್ತಿ ಬೀಜ ಮಾರಾಟ ಮನೆ ಮೇಲೆ ಅಧಿಕಾರಿಗಳ ದಾಳಿ, ಪ್ರಕರಣ ದಾಖಲು

Chickalaparvi Camp Illigal Cotton Seeds Sales
ಮಾನ್ವಿ ತಾಲೂಕಿನ ಚೀಕಲಪರ್ವಿ ಕ್ಯಾಂಪ್‌ನ ಪೇರಯ್ಯ ಎಂಬಾತ ಅನಧಿಕೃತ ಮಾರಾಟ ಮಾಡುತ್ತಿದ್ದ ಹತ್ತಿ ಬೀಜಗಳನ್ನು ಕೃಷಿ ಅಧಿಕಾರಿ ಬಿ. ಹುಸೇನಸಾಬ್ ತಂಡ ವಶಕ್ಕೆ ಪಡೆಯಿತು.
Published on: 

ಮಾನ್ವಿ: ಚೀಕಲಪರ್ವಿ ಕ್ಯಾಂಪ್‌ನ ಪೇರಯ್ಯ ಎಂಬಾತ ಮನೆಯಲ್ಲಿ ಅಕ್ರಮ ದಾಸ್ತಾನು ಮಾಡಿಕೊಂಡು ಅನಧಿಕೃತ ಹತ್ತಿ ಬೀಜ ಮಾರಾಟ ವೇಳೆ ಸಹಾಯಕ ಕೃಷಿ ನಿರ್ದೇಶಕ ಬಿ. ಹುಸೇನಸಾಬ್ ತಂಡ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ದಾಸ್ತಾನು ಬುಧವಾರ ವಶಪಡಿಸಿಕೊಂಡಿತು.

3.21 ಲಕ್ಷ ರೂ. ಮೌಲ್ಯದ 270 ಕೆಜಿಯ 602 ಹತ್ತಿ ಬೀಜದ ಪ್ಯಾಕೇಟ್‌ಗಳನ್ನು ವಶಕ್ಕೆ ಪಡೆದು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಕೃಷಿ ಅಧಿಕಾರಿಗಳಾದ ನಿಯಾಜ್ ಅಹ್ಮದ್, ವೆಂಕಣ್ಣ ಯಾದವ್ ಇದ್ದರು.