ಶಿಕಾಗೋ ಇಂಟರ್​ನ್ಯಾಷನಲ್​ ಟೆರ್ರೈನ್ ಬಿನಾಲೆಗೆ 'ಯಕ್ಷ'

11
Published on

ಡಾ. ಡಾ. ಜನಾರ್ದನ ಹಾವಂಜೆಯ ಕಾವಿ ಕಲಾಕೃತಿ ಆಯ್ಕೆ

ಭಾಸ ಗ್ಯಾಲರಿ ಮತ್ತು ಸ್ಟುಡಿಯೋದಲ್ಲಿ ಕಲಾಪ್ರದರ್ಶನ

ವಿಜಯವಾಣಿ ಸುದ್ದಿಜಾಲ ಉಡುಪಿ

ವಿಶ್ವದ ಸಮಕಾಲೀನ ಕಲೆಯನ್ನು ಜನ ಸಾಮಾನ್ಯರೊಂದಿಗೆ ಬೆಸೆಯುವ ಪ್ರಯತ್ನವಾಗಿ ಅಮೆರಿಕದ ಶಿಕಾಗೋ ಇಂಟರ್​ನ್ಯಾಷನಲ್​ ಟೆರ್ರೈನ್​ ಬಿನಾಲೆಯು ಅ.1ರಿಂದ ನ.15ರ ವರೆಗೆ ಪ್ರಪಂಚದಾದ್ಯಂತ ನಡೆಯುತ್ತಿದ್ದು, ಉಡುಪಿಯ ಕಾವಿ ಕಲಾವಿದ ಡಾ. ಜನಾರ್ದನ ರಾವ್​ ಹಾವಂಜೆ ಅವರ ಯಕ್ಷ ಕಲಾಕೃತಿ ಆಯ್ಕೆಗೊಂಡಿದೆ.

22
ಅಂತಾರಾಷ್ಟ್ರೀಯ ಕಾರ್ಯಕ್ರಮದ ನಿಮಿತ್ತ ಹಾವಂಜೆಯ ಭಾಸ ಗ್ಯಾಲರಿ ಮತ್ತು ಸ್ಟುಡಿಯೋದಲ್ಲಿ ಯಕ್ಷ ಕಲಾಕೃತಿಯ ಪ್ರದರ್ಶನ ನಡೆಯುತ್ತಿದೆ. ಅಮೆರಿಕ, ಡೆನ್ಮಾರ್ಕ್​, ಜರ್ಮನಿ, ಗ್ರೀಸ್​, ಇಟಲಿ ಸೇರಿದಂತೆ ವಿಶ್ವದ 60ಕ್ಕೂ ಹೆಚ್ಚು ಕಡೆಗಳಲ್ಲಿ 80ಕ್ಕೂ ಅಧಿಕ ಸಮಕಾಲೀನ ಕಲಾಕೃತಿಗಳು ಪ್ರದರ್ಶನಗೊಳ್ಳುತ್ತಿದೆ. ಭಾರತದ 10 ಕಡೆಗಳಲ್ಲಿನ ಕಲಾಕೃತಿಗಳು ಈ ಪ್ರದರ್ಶನಕ್ಕೆ ಆಯ್ಕೆಯಾಗಿವೆ ಎಂದು ಭಾರತದ ಕಲಾಪ್ರದರ್ಶನದ ಸಂಯೋಜಕಿ ಭಾಗ್ಯ ಅಜಯಕುಮಾರ್​ ತಿಳಿಸಿದ್ದಾರೆ.

Web Site Link: https://terrainexhibitions.org/tb25-karnakata-india

ಯಕ್ಷಗಾನ ಕಲಾವಿದನ ಬದುಕಿನ ಬಿಂಬ

33
ಹಾವಂಜೆಯಲ್ಲಿ ಪ್ರದರ್ಶನಗೊಳ್ಳುತ್ತಿರುವ ಯಕ್ಷ ಕಲಾಕೃತಿಯು ಗ್ರಾಮೀಣ ಬದುಕನ್ನು ದರ್ಶಿಸುವ ಮಿಶ್ರ ಮಾಧ್ಯಮದ ಕಲೆಯಾಗಿದೆ. ಯಕ್ಷ ಕಲಾವಿದನೋರ್ವನ ಬದುಕನ್ನು ಬಿಂಬಿಸಲಿದೆ. ನಿಜ ಜೀವನದ ಯಕ್ಷನನ್ನು ಬಿಂಬಿಸಿದ ಈ ಕಲಾಕೃತಿಯು ಕಾವಿ ಕಲೆಯ ಸಾಂಪ್ರದಾಯಿಕ ಸೊಗಡನ್ನು ಉಳಿಸಿಕೊಂಡಿದೆ. ಗದ್ದೆಯ ಮಣ್ಣಿನ ಜತೆಗೆ ಕೆಮ್ಮಣ್ಣು, ಸುಣ್ಣ ಹಾಗೂ ಕೆಲವು ಛಾಯಾಚಿತ್ರಗಳನ್ನೂ ಬಳಸಿಕೊಂಡು ಅದಕ್ಕೊಂದು ಸಮಕಾಲೀನ ಚೌಕಟ್ಟು ನಿರ್ಮಿಸಲಾಗಿದೆ. ಹಳ್ಳಿಗರ ದೈನಂದಿನ ಬದುಕಿನ ಚಿತ್ರಣ ಮತ್ತು ಯಕ್ಷರಂಗದ ವಿಜೃಂಭಣೆಯ ಅಂಶಗಳನ್ನು ದಾಖಲಿಸುವುದು ಈ ಯಕ್ಷ ಕಲಾಕೃತಿಯ ವಿಶೇಷತೆಯಾಗಿದೆ ಎಂದು ಕಾವಿ ಕಲಾವಿದ ಡಾ. ಜನಾರ್ದನ ಹಾವಂಜೆ ಮಾಹಿತಿ ನೀಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net