

ವಿಜಯವಾಣಿ ಸುದ್ದಿಜಾಲ ದಾರವಾಡ
ನಗರದ ಕರ್ನಾಟಕ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ನಿವೃತ್ತ ಛಾಯಾಗ್ರಾಹಕ ಚಂದ್ರಶೇಖರ ಪಾಟೀಲ ಕರ್ನಾಟಕ ಫೋಟೊಗ್ರಾಫರ್ ಅಸೋಸಿಯೇಷನ್ ಕೊಡಮಾಡುವ `ಛಾಯಾಶ್ರೀ' ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇತ್ತಿಚಿಗೆ ಬೆಂಗಳೂರಿನಲ್ಲಿ ನಡೆದ ಡಿಜಿ ಇಮೇಜ್- 2024' ವಸ್ತು ಪ್ರದರ್ಶನದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಮಾಜಿ ಶಾಸಕ ಪಿ. ರಾಜು, ಅಸೋಸಿಯೇಷನ್ ಅಧ್ಯಕ್ಷ ಎಚ್.ಎಸ್. ನಾಗೇಶ, ನಿರ್ದೇಶಕ ಮೋಹನ ಮತ್ತು ಧಾರವಾಡ ನಗರ ಫೋಟೊಗ್ರಾಫರ್ - ವಿಡಿಯೋಗ್ರಾಫರ್ ಸಂಘದ ಅಧ್ಯಕ್ಷ ರಾಹುಲ್ ದತ್ತಪ್ರಸಾದ್, ಇತರರಿದ್ದರು.