ಛತ್ರಪತಿ ಶಿವಾಜಿ ರಾಷ್ಟ್ರಭಕ್ತಿ ಮಾದರಿ

19ATHANIGRAMIN2
Published on

ಅಥಣಿ ಗ್ರಾಮೀಣ: ಛತ್ರಪತಿ ಶಿವಾಜಿ ಮಹಾರಾಜರು ದಾರ್ಶನಿಕರು ಮತ್ತು ಪುರಾಣ ಕಥೆಗಳ ಆದರ್ಶ ಪಾತ್ರಗಳಿಂದ ಉತ್ತಮ ಮೌಲ್ಯವನ್ನು ಪಡೆದುಕೊಂಡ ಮಹಾನ್ ನಾಯಕ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.

ಅಥಣಿ ತಾಲೂಕಿನ ಕೋಹಳ್ಳಿ ಗ್ರಾಮದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಯೌವನದಲ್ಲೇ ಜಾಗತಿಕ ಸಾಧನೆ ಮಾಡಿದ ಕೆಲವೇ ವ್ಯಕ್ತಿಗಳಲ್ಲಿ ಶಿವಾಜಿ ಪ್ರಮುಖರಾದವರು. ಶಿವಾಜಿ ಅಳವಡಿಸಿಕೊಂಡಿದ್ದ ಮೌಲ್ಯಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು ಎಂದರು. ಕೆಎಎಸ್ ಅಧಿಕಾರಿ ಮಲಗೌಡ ಝೆರೆ ಮಾತನಾಡಿ, ಗೆರಿಲ್ಲ ಯುದ್ಧ ತಂತ್ರವನ್ನು ಜಗತ್ತಿಗೆ ಪರಿಚಯಿದ ಕೀರ್ತಿ ಶಿವಾಜಿ ಮಹಾರಾಜರಿಗೆ ಸಲ್ಲುತ್ತದೆ ಎಂದರು.

ಸಹದೇವ ಸೂರ್ಯವಂಶಿ, ಸುರೇಶ ಅಥಣಿ ಹಾಗೂ ಜಿಪಂ ಮಾಜಿ ಸದಸ್ಯ ಬಸವರಾಜ ಬುಟಾಳಿ ಮಾತನಾಡಿದರು.

ಮುಖಂಡರಾದ ಸಂಗಯ್ಯ ಪೂಜಾರಿ, ತುಕಾರಾಮ ಪಡತಾರೆ, ದಿಲೀಪ್ ಮರಗಾಳೆ, ಶಂಕರಯ್ಯ ಹಿರೇಮಠ, ನೂರಅಹಮ್ಮದ್ ಡೊಂಗರಗಾಂವ, ತಾಪಂ ಮಾಜಿ ಸದಸ್ಯ ಸದಾಶಿವ ಹರಪಳೆ, ಉಮಯ್ಯ ಪೂಜಾರಿ, ಮಲಗೌಡ ಪಾಟೀಲ, ಮೈನುದ್ದೀನ್ ಡೊಂಗರಗಾಂವ, ಕೇದಾರಿ ಒಳಸಂಗ, ಎಸ್.ಎಲ್. ಪೂಜಾರಿ, ಗ್ರಾಪಂ ಮಾಜಿ ಅಧ್ಯಕ್ಷ ತುಕಾರಾಮ ದೇವಖಾತೆ, ನಿಜಲಿಂಗ ಬಡಕೆ, ಶಿವಾಜಿ ನಾಗಣಿ, ಪತಂಗರಾವ್ ಕೊಡಗ, ಸಿಕಂದರ ಮುಜಾವರ, ಜಯವಂತ ಪಡತಾರೆ, ಶಿವಗೌಡ ಮುಧೋಳ, ಸುರೇಶ ಅವತಾಡೆ, ಅಪ್ಪು ಭೋಸಲೆ ಇತರರಿದ್ದರು. ವಿಷ್ಣು ನಾಗಣೆ ನಿರೂಪಿಸಿ, ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net