

ಲಕ್ಷೆ್ಮೕಶ್ವರ: ಛತ್ರಪತಿ ಶಿವಾಜಿ ಮಹಾರಾಜರು ಧೀಮಂತ ಯೋಧರಾಗಿದ್ದರು. ಪಶ್ಚಿಮ ಭಾಗದಲ್ಲಿ ಮರಾಠಾ ಸಾಮ್ರಾಜ್ಯವನ್ನು ಸ್ಥಾಪಿಸಿದವರೂ ಶಿವಾಜಿ ಮಹಾರಾಜರೇ ಆಗಿದ್ದಾರೆ ಎಂದು ಶಾಸಕ ಚಂದ್ರು ಲಮಾಣಿ ಹೇಳಿದರು.
ಶಿವಾಜಿ ಮಹಾರಾಜರ ಜಯಂತಿ ನಿಮಿತ್ತ ತಾಲೂಕಿನ ವಡೆಯರ ಮಲ್ಲಾಪೂರ ಗ್ರಾಮದಲ್ಲಿ ಬುಧವಾರ ಶ್ರೀ ಛತ್ರಪತಿ ಶಿವಾಜಿ ಕ್ಷತ್ರೀಯ ಮರಾಠಾ ಸಮಾಜ ಸಂಘದ ಶಿವಾಜಿ ಸಮುದಾಯ ಭವನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹತ್ತಿಮತ್ತೂರ ವಿರಕ್ತಮಠದ ಶ್ರೀ ನಿಜಗುಣ ಶಿವಯೋಗಿಗಳು ಸಾನ್ನಿಧ್ಯ ವಹಿಸಿದ್ದರು. ನಿವೃತ್ತ ಶಿಕ್ಷಕ ಮಂಜುನಾಥ ಡಂಬಳ ಅಧ್ಯಕ್ಷತೆ ವಹಿಸಿದ್ದರು. ಶಂಕರ ಮರಾಠೆ, ಶರಣಬಸವ ಹವಾಲ್ದಾರ, ಅಣ್ಣಪ್ಪ ರಾಮಗಿರಿ, ಪದ್ಮರಾಜ ಪಾಟೀಲ, ಹೊನ್ನಪ್ಪ ಪಶುಪತಿಹಾಳ, ನಾಗರತ್ನಾ ಕಡಾರಿ, ರಾಮಣ್ಣ ಡಂಬಳ, ಎಂ.ಎಸ್. ಪಾಟೀಲ, ವೆಂಕಪ್ಪ ಬಡಿಗೇರ, ಈಶ್ವರ ಗದಗ, ಈಶ್ವರ ಲೋಂಡೆ, ಮಂಜುನಾಥ ಡಂಬಳ, ಪ್ರಭಾಕರ ಜಾಧವ, ಎಂ.ಎಸ್. ಡಂಬಳ, ವೆಂಕಟೇಶ ಬಡಿಗೇರ, ಬಸವರಾಜ ಡಂಬಳ, ಪರಮೇಶ್ವರ ಡಂಬಳ, ಮಹೇಶ ಡಂಬಳ, ವೀರಪ್ಪ ಬಡಿಗೇರ, ಇತರರು ಉಪಸ್ಥಿತರಿದ್ದರು. ವಕೀಲ ಮಹೇಶ ಹಾರೋಗೇರಿ ಉಪನ್ಯಾಸ ನೀಡಿದರು.
ಇದಕ್ಕೂ ಮೊದಲು ಮುಂಜಾನೆ 8 ಗಂಟೆಗೆ ಪೂರ್ಣಕುಂಭ ಹಾಗೂ ಸಕಲ ವಾದ್ಯವೈಭವಗಳೊಂದಿಗೆ ಶಿವಾಜಿ ಮಹಾರಾಜರ ಬೃಹತ್ ಮೂರ್ತಿಯ ಮೆರವಣಿಗೆಯು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಪಿ.ಪಿ. ಗಾಯಕವಾಡ ಧ್ವಜಪೂಜೆ ನೆರವೇರಿಸಿದರು. ಬಳಿಕ ತೊಟ್ಟಿಲು ಪೂಜಾ ಕಾರ್ಯಕ್ರಮ ನಡೆಯಿತು.