ಶಿವಾಜಿ ಮಹಾರಾಜರ ರಾಷ್ಟ್ರ ಪ್ರೇಮ ಆದರ್ಶವಾಗಲಿ

19 Dwd 3
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಛತ್ರಪತಿ ಶಿವಾಜಿ ಮಹಾರಾಜರು ಎಲ್ಲ ಭಾರತೀಯರಿಗೂ ಪ್ರೇರಣೆ ಮತ್ತು ಆದರ್ಶ. ಅವರ ರಾಷ್ಟç ಪ್ರೇಮ, ದೇಶ ಭಕ್ತಿ ಮತ್ತು ಸ್ವಾಭಿಮಾನ, ದೈರ್ಯದ ಗುಣಗಳನ್ನು ಮಕ್ಕಳಲ್ಲಿ ಅಳವಡಿಸಿ ಬೆಳೆಸಬೇಕು ಎಂದು ಅಪರ ಜಿಲ್ಲಾಽಕಾರಿ ಗೀತಾ ಸಿ.ಡಿ. ಹೇಳಿದರು.

ನಗರದ ಮರಾಠಾ ವಿದ್ಯಾಪ್ರಸಾರಕ ಮಂಡಳದ ಭಾರತ ಪ್ರೌಢಶಾಲೆ ಆವರಣದಲ್ಲಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಶಿವಾಜಿ ಮಹಾರಾಜರು ಕನ್ನಡ ಮತ್ತು ಕರ್ನಾಟಕದೊಂದಿಗೆ ಅವಿನಾಭಾವ ಸಂಬ0ಧ ಹೊಂದಿದ್ದರು. ಅವರು ಯುದ್ಧ ಸಂದರ್ಭದಲ್ಲಿ ಧಾರವಾಡ ಜಿಲ್ಲೆಯ ಯಾದವಾಡ ಗ್ರಾಮದವರೆಗೆ ಬಂದಿರುವ ಬಗ್ಗೆ ಪುರಾವೆಗಳಿವೆ. ಭಾರತದಲ್ಲಿ ಶಿವಾಜಿ ಮಹಾರಾಜರ ಮೊದಲ ಶಿಲ್ಪದ ಪ್ರತಿಮೆಯನ್ನು ಜಿಲ್ಲೆಯ ಯಾದವಾಡದಲ್ಲಿ ಸಂಶೋಽಸಲಾಗಿದೆ. ಶಿವಾಜಿ ಮಹಾರಾಜರ ಜೀವನ ಚರಿತ್ರೆಯನ್ನು ಅವಲೋಕಿಸಿದಾಗ ಕರ್ನಾಟಕದ ಮೇಲಿನ ಪ್ರಭಾವ ಕಾಣಬಹುದು ಎಂದರು.

ಪಾಲಿಕೆ ಸದಸ್ಯ ಶಂಕರ ಶಳಕೆ ಮಾತನಾಡಿ, ಶಿವಾಜಿ ಮಹಾರಾಜರು ಭಾರತದ ರಕ್ಷಣೆ, ಹಿಂದು ಧರ್ಮದ ಏಕತೆಗೆ ಅಮೂಲ್ಯ ಕೊಡುಗೆ ನೀಡಿದ್ದಾರೆ ಎಂದರು.

ಪಾಲಿಕೆ ಸದಸ್ಯ ಡಾ. ಮಯೂರ ಮೋರೆ ಮಾತನಾಡಿದರು. ಸಿವಿಲ್ ಇಂಜಿನಿಯರ್‌ಗಿರೀಶ ಪವಾರ ಅವರು `ಛತ್ರಪತಿ ಶ್ರೀ ಶಿವಾಜಿ ಮಹಾರಾಜರ ಜೀವನ ಚರಿತ್ರೆ' ಕುರಿತು ವಿಶೇಷ ಉಪನ್ಯಾಸ ನೀಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರವಿ ಕುಲಕರ್ಣಿ ವಂದಿಸಿದರು.

ಮರಾಠಾ ವಿದ್ಯಾಪ್ರಸಾರಕ ಮಂಡಳದ ಅಧ್ಯಕ್ಷ ಮನೋಹರ ಎನ್. ಮೋರೆ, ಕಾರ್ಯಾಧ್ಯಕ್ಷ ಸುಭಾಸ ಶಿಂಧೆ, ಉಪಾಧ್ಯಕ್ಷ ಯಲ್ಲಪ್ಪ ಚವ್ಹಾಣ, ಪದಾಽಕಾರಿಗಳಾದ ರಾಜು ಬಿರಜೆನವರ, ಮಲ್ಲೇಶಪ್ಪ ಶಿಂಧೆ, ಭೀಮಪ್ಪ ಕಾಸಾಯಿ, ಹಾಗೂ ಸಮಾಜದ ಹಿರಿಯರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net