19ರಂದು ಛತ್ರಪತಿ ಶಿವಾಜಿ ಜಯಂತಿ ಆಚರಣೆ

CTD 9 CHATRAPATI SHIVAJI-02
Published on

ಚಿತ್ರದುರ್ಗ: ಜಿಲ್ಲಾಡಳಿತ,ಜಿಪಂ,ಕನ್ನಡ ಮತ್ತು ಸಂಸ್ಕೃತಿ ಇಲಾಖೆ,ನಗರಸಭೆ ಹಾಗೂ ಜಿಲ್ಲಾ ಮರಾಠ ವಿದ್ಯಾವರ್ಧಕ ಸಂಘ ಸಹಯೋಗದಲ್ಲಿ ಫೆ.19ರಂದು ನಗರದಲ್ಲಿ ಛತ್ರಪತಿ ಶಿವಾಜಿ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲು ನಿರ್ಧರಿಸಲಾಯಿತು. ಈ ಸಂಬಂಧ ಎಸಿ ಕಚೇರಿಯಲ್ಲಿ ಗುರುವಾರ ಅಪರ ಜಿಲ್ಲಾಧಿಕಾರಿ ಜವರೇಗೌಡ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ಜರುಗಿತು.

ಮರಾಠ ಸಮುದಾಯದಿಂದ ಅಂದು ಬೆಳಗ್ಗೆ 9 ಗಂಟೆಗೆ,ಸಂಗೋಳ್ಳಿ ರಾಯಣ್ಣ ವೃತ್ತದಿಂದ ಕಲಾ ತಂಡಗಳೊಂದಿಗೆ ಛತ್ರಪತಿ ಶಿವಾಜಿ ಪುತ್ಥಳಿ ಮೆರವಣಿಗೆ ನಡೆಸಲಾಗುವುದು. 11 ಗಂಟೆಗೆ ತ.ರಾ.ಸು ರಂಗಮಂದಿರದಲ್ಲಿ ವೇದಿಕೆ ಕಾರ‌್ಯಕ್ರಮ ಜರುಗಲಿದೆ. ಸಂಪನ್ಮೂಲ ವ್ಯಕ್ತಿ ಮಂಜುನಾಥ ಸ್ವಾಮಿ ಉಪನ್ಯಾಸ ನೀಡಲಿದ್ದಾರೆ. ಉಪಹಾರ ವ್ಯವಸ್ಥೆ ಇರುತ್ತದೆ ಎಂದರು.

ಶಿವಾಜಿ ಜಯಂತಿ ಕುರಿತು ನಗರ ಪ್ರಮುಖ ವೃತ್ತಗಳಲ್ಲಿ ಬ್ಯಾನರ್ ಅಳವಡಿಸಲು ಅನುಮತಿ ನೀಡಬೇಕೆಂದು ಸಮುದಾಯ ಮು ಖಂಡರು ಮನವಿಗೆ ಸ್ಪಂದಿಸಿದ ಎಡಿಸಿ,ಸಾರ್ವಜನಿಕ ಭಾವನೆಗಳಿಗೆ ಧಕ್ಕೆ ಆಗದಂತೆ ಬ್ಯಾನರ್ ಅಳವಡಿಸ ಬೇಕೆಂದರು. ಎಎಸ್‌ಪಿ ಕು ಮಾರಸ್ವಾಮಿ,ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ, ಜಿಲ್ಲಾ ಮರಾಠ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಸುರೇಶರಾವ್ ಜಾಧವ್,ಕಾರ‌್ಯದರ್ಶಿ ಜಿ.ಗೋಪಾಲರಾವ್,ಜೀಜಾಬಾಯಿ ಮಹಿಳಾ ಸಂಘದ ಅಧ್ಯಕ್ಷೆ ಉಷಾಬಾಯಿ ಮತ್ತಿತರರು ಇದ್ದ ರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net